ನ.8 ರ ಪ್ರತಿಭಟನೆಯ ಯಶಸ್ಸಿಗೆ ಶ್ರಮಿಸಿ ಪ್ರತೀ ಜಿಲ್ಲೆಯಲ್ಲಿ ಕನಿಷ್ಠ 1000 ಜನರು ಪಾಲ್ಗೊಳ್ಳುವಂತೆ ಮಾಡಲು ಇಂದಿನಿಂದಲೇ ಪ್ರಯತ್ನಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು(ನ. 06): ಬಿಜೆಪಿಯ ಎಲ್ಲಾ ಜಿಲ್ಲಾ ಘಟಕಗಳೂ ನವಂಬರ್ 8ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಕೆಎಫ್'ಡಿ, ಎಸ್'ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್'ಐ) ಸಂಘಟನೆಗಳ ನಿಷೇಧಿಸಬೇಕು; ಟಿಪ್ಪು ಜಯಂತಿ ಆಚರಣೆ ನಿಲ್ಲಿಸಬೇಕು; ಹಾಗೂ ಎರಡೂವರೆ ವರ್ಷಗಳ ಅವಧಿಯಲ್ಲಿ ನಡೆದಿರುವ ಬಿಜೆಪಿ ಮತ್ತು ಪರಿವಾರ ಕಾರ್ಯಕರ್ತರ ಹತ್ಯೆ ಪ್ರಕರಣದ ತನಿಖೆಯನ್ನು ಎನ್'ಐಎಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷವು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಲ್ಕು ದಿನಗಳಿಂದ ಬೆಂಗಳೂರು ಹೊರವಲಯದಲ್ಲಿ ರಾಜ್ಯದ ಪ್ರಮುಖ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿರುವ ಪ್ರಶಿಕ್ಷಣ ಶಿಬಿರ ಇಂದು ಮಧ್ಯಾಹ್ನ ಮುಕ್ತಾಯವಾಗಲಿದೆ. ನ.8 ರ ಪ್ರತಿಭಟನೆಯ ಯಶಸ್ಸಿಗೆ ಶ್ರಮಿಸಿ ಪ್ರತೀ ಜಿಲ್ಲೆಯಲ್ಲಿ ಕನಿಷ್ಠ 1000 ಜನರು ಪಾಲ್ಗೊಳ್ಳುವಂತೆ ಮಾಡಲು ಇಂದಿನಿಂದಲೇ ಪ್ರಯತ್ನಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.