ಲೋಕಸಭಾ ಚುನಾವಣೆಗೆ ಬಿಜೆಪಿ ಆರಂಭಿಸಿದೆ ಭರ್ಜರಿ ತಯಾರಿ

BJP to get ready for 2019 Lok Sabha polls
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇನ್ನು ಚುನಾವಣೆ ಗೆಲುವಿಗೆ  ಟೊಂಕ‌‌ ಕಟ್ಟಿ ನಿಂತ ಬಿಜೆಪಿ ಯುವ ಮೋರ್ಚಾವೂ ಮೋದಿ ಸರ್ಕಾರದ ಯೋಜನೆಗಳನ್ನು ಬೈಕ್‌ ರ‍್ಯಾಲಿಗಳ ಮೂಲಕ ಮನವರಿಕೆ ಮಾಡಲು ಯತ್ನಿಸುತ್ತಿದೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇನ್ನು ಚುನಾವಣೆ ಗೆಲುವಿಗೆ  ಟೊಂಕ‌‌ ಕಟ್ಟಿ ನಿಂತ ಬಿಜೆಪಿ ಯುವ ಮೋರ್ಚಾವೂ ಮೋದಿ ಸರ್ಕಾರದ ಯೋಜನೆಗಳನ್ನು ಬೈಕ್‌ ರ‍್ಯಾಲಿಗಳ ಮೂಲಕ ಮನವರಿಕೆ ಮಾಡಲು ಯತ್ನಿಸುತ್ತಿದೆ. 

ರಾಜ್ಯಾದ್ಯಂತ ಒಟ್ಟು 5  ದಿನಗಳ ಕಾಲ ಬೃಹತ್ ಬೈಕ್‌ ರ‍್ಯಾಲಿ ಆಯೋಜನೆ ಮಾಡಿದೆ. ಜೂನ್ 15 ರಿಂದ 20 ರವರೆಗೆ ರಾಜ್ಯಾದ್ಯಂತ ಯುವ ಮೋರ್ಚಾ ಬೈಕ್‌ ರ‍್ಯಾಲಿ ಆಯೋಜನೆ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೂಡ ಬೈಕ್‌ ರ‍್ಯಾಲಿ ಮಾಡುತ್ತಿದ್ದು, ಒಟ್ಟು 224 ವಿಧಾನಸಭಾ  ಕ್ಷೇತ್ರಗಳಲ್ಲಿ  ರ‍್ಯಾಲಿ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪ ಸೂಚನೆ ನೀಡಿದ್ದಾರೆ.  

ಇನ್ನು ಪ್ರತಿ ಬೈಕ್‌ ರ‍್ಯಾಲಿಯೂ ಯಶಸ್ವಿಯಾಗಬೇಕು ಎಲ್ಲಾ ಕಡೆ ಬೈಕ್‌ ರ‍್ಯಾಲಿಗೆ ಭರ್ಜರಿ ರೆಸ್ಪಾನ್ಸ್ ಸಿಗುವಂತಾಗಬೇಕು. ಆಯಾ ಜಿಲ್ಲೆಗಳ ಸಂಸದರು, ಜಿಲ್ಲಾದ್ಯಕ್ಷರು, ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಶಾಸಕರು , ಪದಾಧಿಕಾರಿಗಳು ಬೈಕ್‌ ರ‍್ಯಾಲಿ ಯಶಸ್ಸಿಗೆ ಶ್ರಮ ಹಾಕಬೇಕು ಎಂದು ಬಿಎಸ್ ವೈ ಸೂಚನೆ ನೀಡಿದ್ದಾರೆ. 

loader