ಮೋದಿಯನ್ನ ಟೀಕಿಸಿದ್ದ ರಾಹುಲ್ ಗಾಂಧಿ ಧರಿಸಿದ ಜಾಕೆಟ್ ಬೆಲೆ ಎಷ್ಟು ಗೊತ್ತೆ ?

BJP takes jibe at Rahul Gandhis Rs 70000 jacket
Highlights

'ನೀವು ಮೇಘಾಲಯ ಕಾಂಗ್ರೆಸ್ ಸರ್ಕಾರದ  ಭ್ರಷ್ಟಾಚಾರದ ವರದಿಯನ್ನು ತೋರಿಸುವ ಸಲುವಾಗಿಯೇ ಈ ರೀತಿಯ ಜಾಕೇಟ್ ಧರಿಸಿ ಬಂದಿದ್ದೀರಿ, ನಿಮ್ಮ ಧರಿಸಿನ ಉದಾಸೀನತೆ ನಮಗೆ ಅಣಕಿಸಿರುವಂತೆ ಕಾಣುತ್ತಿದೆ

ಶಿಲ್ಲಾಂಗ್(ಜ.31): ಹನ್ನೊಂದು ಲಕ್ಷ ರೂ. ಬೆಲೆಯ ಕೋಟ್ ಧರಿಸಿದ ಕಾರಣ ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸುತ್ತಿದ್ದ ರಾಹುಲ್ ಗಾಂಧಿಯವರು ತಾವೇ ಈಗ 70 ಸಾವಿರ ರೂ. ಬೆಲೆ ಜಾಕೆಟ್ ಧರಿಸಿ ಬಿಜೆಪಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಮಂಗಳವಾರ ಸಂಜೆ ಸಂಗೀತ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಅವರು ಇಂಗ್ಲೆಂಡಿನ ಕಂಪನಿ ಬುರ್'ಬೆರ್ರಿಯ ಜಾಕೇಟ್ ಧರಿಸಿದ್ದು ಅದರ ಮುಖಬೆಲೆ 68.165 ರೂ. ಇದೆ. ದುಬಾರಿ ಬೆಲೆಯ ಜಾಕೇಟ್ ಧರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.

'ನೀವು ಮೇಘಾಲಯ ಕಾಂಗ್ರೆಸ್ ಸರ್ಕಾರದ  ಭ್ರಷ್ಟಾಚಾರದ ವರದಿಯನ್ನು ತೋರಿಸುವ ಸಲುವಾಗಿಯೇ ಈ ರೀತಿಯ ಜಾಕೇಟ್ ಧರಿಸಿ ಬಂದಿದ್ದೀರಿ, ನಿಮ್ಮ ಧರಿಸಿನ ಉದಾಸೀನತೆ ನಮಗೆ ಅಣಕಿಸಿರುವಂತೆ ಕಾಣುತ್ತಿದೆ'ಎಂದು ಮೇಘಾಲಯ ಬಿಜೆಪಿ ಘಟಕ ಮೂಲ ಜಾಕೇಟ್'ನ ಪೋಟೊ ಹಾಗೂ ರಾಹುಲ್ ಅವರ ಚಿತ್ರವನ್ನು ಸೇರಿಸಿ ಟ್ವೀಟ್ ಮಾಡಿದೆ.

2015ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಬರಾಕ್ ಅವರೊಂದಿಗಿನ ಭೇಟಿಯ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 11 ಲಕ್ಷ ರೂ. ಬೆಲೆಯ ಸೂಟ್ ಧರಸಿದ್ದರು. ಆ ಸೂಟ್ 4.31 ಕೋಟಿಗೆ ಹರಾಜು ಕೂಡ ಆಗಿತ್ತು. ಮೆಘಾಲಯ ವಿದಾನಸಭಾ ಚುನಾವಣೆ ಫೆಬ್ರವರಿ 27ರಂದು ನಡೆಯಲಿದ್ದು, ಮಾರ್ಚ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

 

loader