ಒಟ್ಟು 123 ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 107 ಸ್ಥಾನಗಳಲ್ಲಿ ಜಯಗಳಿಸಿದೆ. 2 ಪುರಸಭೆ,ಒಂದು ತಾಲೂಕು ಪಂಚಾಯಿತಿ ಒಳಗೊಂಡು ಹಲವು ಸ್ಥಳೀಯ ಸಂಸ್ಥೆಗಳಿಗೆ ಭಾನುವಾರ ಚುನಾವಣೆ ನಡೆದಿತ್ತು.
ಅಹಮದಾಬಾದ್(ನ.29): ನೋಟು ರದ್ದತಿ ಯೋಜನೆ ಗುಜರಾತಿನಲ್ಲಿ ಸಕಾರಾತ್ಮಕವಾಗಿ ಪರಿಣಮಿಸಿದ್ದು, ರಾಜ್ಯದಾದ್ಯಂತ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಜಯ ಗಳಿಸಿದೆ. ಈ ಗೆಲುವಿನಿಂದ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಗೆಲುವಿನ ಮುನ್ನುಡಿ ಬರೆದಿದೆ.
ಒಟ್ಟು 123 ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 107 ಸ್ಥಾನಗಳಲ್ಲಿ ಜಯಗಳಿಸಿದೆ. 2 ಪುರಸಭೆ,ಒಂದು ತಾಲೂಕು ಪಂಚಾಯಿತಿ ಒಳಗೊಂಡು ಹಲವು ಸ್ಥಳೀಯ ಸಂಸ್ಥೆಗಳಿಗೆ ಭಾನುವಾರ ಚುನಾವಣೆ ನಡೆದಿತ್ತು.
ವಿರೋಧ ಪಕ್ಷವಾದ ಕಾಂಗ್ರೆಸ್ಕೇವಲ 16 ಸ್ಥಾನಗಳನ್ನು ಮಾತ್ರ ಜಯಗಳಿಸಿದೆ. ವಲ್ಸಾಡ್ ಜಿಲ್ಲೆಯ ವಾಪಿ ಪುರಸಭೆಯ ಒಟ್ಟು 44 ಸ್ಥಾನಗಳಲ್ಲಿ ಬಿಜೆಪಿ 41 ಸ್ಥಾನಗಳಲ್ಲಿ ಜಯಗಳಿಸಿದೆ. ಸೂರತ್' ಜಿಲ್ಲೆಯಲ್ಲಿ 28ಕ್ಕೆ 27 ಸ್ಥಾನಗಳಿಸಿದೆ.