ಚರ್ಚ್ ಗೆ ಸೆಡ್ಡು ಹೊಡೆದು ಮೋದಿ ಪರ ಅರ್ಚನೆ..!

BJP supporter worship in temple for Narendra Modi
Highlights

ಸೇರಿಗೆ ಸವ್ವಾ ಸೇರು ಅಂದ್ರೆ ಇದೆ ಇರಬೇಕು ನೋಡಿ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಯಾರಾದರೂ ತಮ್ಮದೇ ಶೈಲಿಯಲ್ಲಿ ಅಭಿಯಾನ ಆರಂಭಿಸಿದರೆ, ಮೋದಿ ಅಭಿಮಾನಿಗಳು ಅವರಿಗೆ ಅವರದ್ದೇ ದಾಟಿಯಲ್ಲಿ ತಿರುಗೇಟು ನೀಡುತ್ತಾರೆ.

ಬೆಂಗಳೂರು(ಮೇ 29): ಸೇರಿಗೆ ಸವ್ವಾ ಸೇರು ಅಂದ್ರೆ ಇದೆ ಇರಬೇಕು ನೋಡಿ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಯಾರಾದರೂ ತಮ್ಮದೇ ಶೈಲಿಯಲ್ಲಿ ಅಭಿಯಾನ ಆರಂಭಿಸಿದರೆ, ಮೋದಿ ಅಭಿಮಾನಿಗಳು ಅವರಿಗೆ ಅವರದ್ದೇ ದಾಟಿಯಲ್ಲಿ ತಿರುಗೇಟು ನೀಡುತ್ತಾರೆ.

ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದ್ದು, 2019 ರಲ್ಲಿ ಜಾತ್ಯಾತೀತ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕು ಎಂದು ಚರ್ಚ್ ಗಳಲ್ಲಿ ಪ್ರತಿ ಶುಕ್ರವಾರ ವಿಶೇಷ ಪ್ರಾರ್ಥನೆ ನಡೆಸುವಂತೆ ದೆಹಲಿಯ ಆರ್ಚ್ ಬಿಷಪ್ ಇತ್ತಿಚೀಗಷ್ಟೇ ಹೇಳಿದ್ದರು. ಈ ಮೂಲಕ ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ದ ಬಿಷಪ್ ಅಭಿಯಾನ ಆರಂಭಿಸಿದ್ದರು.

ಇದಕ್ಕೆ ಸೆಡ್ಡು ಹೊಡೆದಿರುವ ಮೋದಿ ಅಭಿಮಾನಿಯೋರ್ವ, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲಿ ಎಂದು ಬಯಸಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತನಾಗಿರುವ ಅರುಣ್ ಗೌಡ ಎಂಬುವವರು ಮೋದಿ ಪರ  ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಅರ್ಚನೆ ಮಾಡಿಸಿದ್ದಾರೆ. ಚರ್ಚ್ ಗಳಲ್ಲಿ ಮೋದಿ ವಿರುದ್ಧ ಪ್ರತಿ ದಿನ‌ ಪ್ರಾರ್ಥನೆ ನಡೆಸುತ್ತಿರುವಾಗ ಹಿಂದುಗಳು ದೇವಸ್ಥಾನಗಳಲ್ಲಿ ಅರ್ಚನೆ ಮಾಡಿಸಿ ಎಂದು ಅರುಣ್ ಟ್ವಿಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಾವು ಅರ್ಚನೆ ಮಾಡಿಸಿದ ರಸೀದಿ ಫೋಟೋ ಕೂಡ ಅಪ್ಲೋಡ್ ಮಾಡಿರುವ ಅರುಣ್, ಮೋದಿ ವಿರೋಧಿ ಶಕ್ತಿಗಳೆಲ್ಲ ಒಂದಾಗಿರುವಾಗ ಹಿಂದುಗಳು ಒಗ್ಗಟ್ಟು ಪ್ರದರ್ಶಿಸದಿದ್ದರೆ ಉಳಿಗಾಲವಿಲ್ಲ ಎಂದೂ ಅರುಣ್ ಎಚ್ಚರಿಸಿದ್ದಾರೆ.

loader