ನವದೆಹಲಿ (ನ.25): ಸಂಸತ್ತಿನಲ್ಲಿ ಕಡಿಮೆ ಹಾಜರಾತಿವುಳ್ಳವರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಹಕ್ಕಿಲ್ಲವೆಂದು ಬಿಜೆಪಿ ನಾಯಕ ಅನುರಾಗ್ ಠಾಕೂರ್ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನಲ್ಲಿ ಕೇವಲ ಶೇ.40 ಹಾಜರಾತಿ ಇರುವ ಸಂಸದ ಮೋದಿಯವರನ್ನು ಪ್ರಶ್ನಿಸುತ್ತಿದ್ದಾರೆ. ಅವರು ಸಂಸತ್ತು ಕಲಾಪಗಳನ್ನು ಎಷ್ಷು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಇದರಿಂದ ತಿಳಿಯುತ್ತಿದೆ, ಎಂದು ಠಾಕೂರ್ ಹೇಳಿದ್ದಾರೆ.

ತಾವು ಬಡವರ ಪರವಾಗಿದ್ದೇವೆಯೆಂದು ಕಾಂಗ್ರೆಸ್ ತೋರ್ಪಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಠಾಕೂರ್, ನನ್ನ ಬಳಿ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ, ಮೊದಲು ನನ್ನೊಂದಿಗೆ ಚರ್ಚಿಸಲಿ ಎಂದು ಸವಾಲೆಸೆದಿದ್ದಾರೆ.