ಕರ್ನಾಟಕ, ಪ.ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಮಾತ್ರ ಸುವರ್ಣ ಯುಗ: ಅಮಿತ್ ಶಾ

BJP should win in Karnataka and West bengal
Highlights

ಕಳೆದ ಬಾರಿಯ ಚುನಾವಣೆಯಲ್ಲಿ ಶೂನ್ಯ ಸಂಪಾದಿಸಿದ ಬಿಜೆಪಿ, ತ್ರಿಪುರಾದಲ್ಲಿ ಈ ಸಲ ಸರಕಾರ ರಚಿಸುವಷ್ಟು ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಈಶಾನ್ಯ ರಾಜ್ಯಗಳ ಜನತೆ ಮೋದಿ ಸರಕಾರವನ್ನು ಸಮರ್ಥಿಸಿದ್ದಾರೆಂದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಹೊಸದಿಲ್ಲಿ: ಕಳೆದ ಬಾರಿಯ ಚುನಾವಣೆಯಲ್ಲಿ ಶೂನ್ಯ ಸಂಪಾದಿಸಿದ ಬಿಜೆಪಿ, ತ್ರಿಪುರಾದಲ್ಲಿ ಈ ಸಲ ಸರಕಾರ ರಚಿಸುವಷ್ಟು ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಈಶಾನ್ಯ ರಾಜ್ಯಗಳ ಜನತೆ ಮೋದಿ ಸರಕಾರವನ್ನು ಸಮರ್ಥಿಸಿದ್ದಾರೆಂದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ತೋರಿದ ಸಾಧನೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಚಾಣಕ್ಯ ಅಮಿತ್ ಶಾ, 'ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದಾಗ ಮಾತ್ರ  ಸುವರ್ಣ ಯುಗ ಆರಂಭವಾಗುತ್ತದೆ,' ಎನ್ನುವ ಮೂಲಕ ತ್ರಿ ರಾಜ್ಯಗಳಲ್ಲಿ ಬಿಜೆಪಿ ತೋರಿದ ಸಾಧನೆಗಿನ್ನೂ ಪೂರ್ಣ ತೃಪ್ತರಾಗಿಲ್ಲವೆಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

'ಪ್ರಧಾನಿ ಮೋದಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಜನರು ಬೆಂಬಲ ಸೂಚಿಸಿರುವುದು ಪಕ್ಷದ ಗೆಲುವಿನಿಂದ ವೇದ್ಯವಾಗಿದೆ,' ಎಂದು  ಹೇಳಿದರು.

'ದೇಶದ ಯಾವುದೇ ರಾಜ್ಯಕ್ಕೂ ಎಂಡಪಂಥೀಯ ಪಕ್ಷ ಹೊಂದುವುದಿಲ್ಲವೆಂಬುದಕ್ಕೆ ತ್ರಿಪುರಾದಲ್ಲಿ ಸಿಪಿಎಂಗೆ ಸೋಲಾಗಿರುವುದೇ ಸಾಕ್ಷಿ. ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವಲ್ಲಿಯೂ ವಿಫಲವಾಗಿದ್ದಾರೆ,' ಎಂದರು.
 

loader