Asianet Suvarna News Asianet Suvarna News

ಶಿವಸೇನೆ ಬಿಕ್ಕಟ್ಟಿಗೆ ತೇಪೆ ಹಚ್ಚಲು ಬಿಜೆಪಿ ಯತ್ನ!

ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಶಿವಸೇನೆ ಘೋಷಿಸಿದ ಬೆನ್ನಲ್ಲೇ, ಈ ಬಗ್ಗೆ ಆತಂಕಕ್ಕೊಳಗಾದಂತಿರುವ ಬಿಜೆಪಿ, ಉಭಯ ಪಕ್ಷಗಳ ಮೈತ್ರಿಗೆ ಯಾವುದೇ ಧಕ್ಕೆಯಾಗದಂತೆ ಮುಲಾಮು ಹಚ್ಚಲು ಮುಂದಾಗಿದೆ.

BJP Shiv Sena Alliance not dead yet

ಮುಂಬೈ: ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಶಿವಸೇನೆ ಘೋಷಿಸಿದ ಬೆನ್ನಲ್ಲೇ, ಈ ಬಗ್ಗೆ ಆತಂಕಕ್ಕೊಳಗಾದಂತಿರುವ ಬಿಜೆಪಿ, ಉಭಯ ಪಕ್ಷಗಳ ಮೈತ್ರಿಗೆ ಯಾವುದೇ ಧಕ್ಕೆಯಾಗದಂತೆ ಮುಲಾಮು ಹಚ್ಚಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಉದ್ಭವಿಸಿದ ಬಿಕ್ಕಟ್ಟು ಶಮನಕ್ಕಾಗಿ ಮಂಗಳವಾರ ಉದ್ಧವ್‌ ಠಾಕ್ರೆ ಅವರಿಗೆ ಆಪ್ತರಾದ ಮುಖಂಡರ ಜತೆ ಮಹಾರಾಷ್ಟ್ರದ ಬಿಜೆಪಿ ಮುಖಂಡರು ಸಭೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಲ್ಲಿ ಗಂಡ-ಹೆಂಡತಿ ಜತೆ ವೈಮನಸ್ಯ ಸಾಮಾನ್ಯ. ಆದಾಗ್ಯೂ ಪತ್ನಿಗೆ ವಿಚ್ಛೇದನ ನೀಡಲು ನಾನು ಬಯಸಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಆದರೆ, ಶಿವಸೇನೆ-ಬಿಜೆಪಿ ಮೈತ್ರಿ ಸಂಬಂಧದಲ್ಲಿ ನಮ್ಮದು ಪತಿಯ ಸ್ಥಾನ. ಹಾಗಾಗಿ, ಮೈತ್ರಿ ಮುರಿದುಕೊಳ್ಳುವ ವಿಚಾರದಿಂದ ಹಿಮ್ಮುಖವಾಗುವ ಮಾತೇ ಇಲ್ಲ ಎಂದು ಶಿವಸೇನೆ ಮುಖಂಡರೊಬ್ಬರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

 

 

Follow Us:
Download App:
  • android
  • ios