Asianet Suvarna News Asianet Suvarna News

ರುದ್ರೇಶ್ ಹತ್ಯೆ ಖಂಡಿಸಿ ಶಿವಾಜಿನಗರದಲ್ಲಿ ಬಿಜೆಪಿ, ಆರೆಸ್ಸೆಸ್ ಬೃಹತ್ ಪ್ರತಿಭಟನೆ

ರುದ್ರೇಶ್ ಕೊಲೆಯು ಆರೆಸ್ಸೆಸ್ ಕಾರ್ಯಕರ್ತರನ್ನು ಮುಗಿಸುವ ವ್ಯವಸ್ಥಿತ ಸಂಚಿನ ಭಾಗವಾಗಿದೆ. ಕೊಡಗು, ಮೈಸೂರು, ಮಂಗಳೂರು ನಂತರ ಬೆಂಗಳೂರಿಗೂ ಹತ್ಯಾ ಸರಣಿ ಕಾಲಿಟ್ಟಿದೆ. ಸರಕಾರದ ಒತ್ತಡಕ್ಕೆ ಮಣಿಯದೇ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಒತ್ತಾಯಿಸಿದ್ದಾರೆ.

bjp rss leaders protest against murder of rudresh

ಬೆಂಗಳೂರು(ಅ. 17): ಆರೆಸ್ಸೆಸ್ ಕಾರ್ಯರ್ತ ರುದ್ರೇಶ್ ಹತ್ಯೆ ಖಂಡಿಸಿ ಇಂದು ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಶಿವಾಜಿನಗರದ ಸುತ್ತಮುತ್ತ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದ್ದಾರೆ. ಶೋಭಾ ಕರಂದ್ಲಾಜೆ, ಆರ್.ಅಶೋಕ್ ಮೊದಲಾದ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ರುದ್ರೇಶ್ ಹಂತಕರನ್ನು ಹಿಡಿದು ಶಿಕ್ಷಿಸಬೇಕೆಂದು ಬಲಪಂಥೀಯ ಮುಖಂಡರು ಆಗ್ರಹಿಸಿದ್ದಾರೆ.

ಕಾವೇರಿ ಗಲಭೆಯಲ್ಲಿ ಆರೆಸ್ಸೆಸ್ ಕೈವಾಡ ಇದೆ ಎಂದು ಶಂಕಿಸಿದ್ದ ಗೃಹಸಚಿವ ಜಿ.ಪರಮೇಶ್ವರ್ ಅವರು ಈಗ ಆರೆಸ್ಸೆಸ್ ಮುಖಂಡನ ಹತ್ಯೆಯಾಗಿ ಒಂದು ದಿನವಾದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಟೀಕಿಸಿದ್ದಾರೆ.

ನಿಷ್ಠಾವಂತ ಕಾರ್ಯಕರ್ತರಾಗಿದ್ದ ರುದ್ರೇಶ್ ಶಿವಾಜಿನಗರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರು. ಅಂತಹ ವ್ಯಕ್ತಿಯನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ತಾವು ಹೋರಾಡುವವರೆಗೂ ಹೋರಾಡುವುದಾಗಿ ಶ್ರೀರಾಮುಲು ಹೇಳಿದ್ದಾರೆ.

ಇನ್ನು, ರುದ್ರೇಶ್ ಕೊಲೆಯು ಆರೆಸ್ಸೆಸ್ ಕಾರ್ಯಕರ್ತರನ್ನು ಮುಗಿಸುವ ವ್ಯವಸ್ಥಿತ ಸಂಚಿನ ಭಾಗವಾಗಿದೆ. ಕೊಡಗು, ಮೈಸೂರು, ಮಂಗಳೂರು ನಂತರ ಬೆಂಗಳೂರಿಗೂ ಹತ್ಯಾ ಸರಣಿ ಕಾಲಿಟ್ಟಿದೆ. ಸರಕಾರದ ಒತ್ತಡಕ್ಕೆ ಮಣಿಯದೇ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಒತ್ತಾಯಿಸಿದ್ದಾರೆ.

ಇಂದು ರುದ್ರೇಶ್ ಹತ್ಯೆ ಖಂಡಿಸಿ ಶಿವಾಜಿನಗರ ಬಂದ್ ಆಚರಿಸಲಾಗುತ್ತಿದೆ. ಎಬಿವಿಪಿ, ವಿಹೆಚ್'ಪಿ, ಬಿಜೆಪಿ ಮೊದಲಾದ ಸಂಘ ಪರಿವಾರ ಸಂಘಟನೆಗಳು ಈ ಬಂದ್'ಗೆ ಬೆಂಬಲ ಸೂಚಿಸಿವೆ. ಇಂದು ಬೆಳಗ್ಗೆಯಿಂದಲೂ ಶಿವಾಜಿನಗರದ ಸುತ್ತಮುತ್ತಲ ಪ್ರದೇಶವು ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿ ಇದೆ. ಶಿವಾಜಿನಗರ, ಫ್ರೇಜರ್ ಟೌನ್, ಡಿಜೆ ಹಳ್ಳಿ, ಭಾರತಿನಗರ, ಕೆಜೆ ಹಳ್ಳಿ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿನ್ನೆ ಮಧ್ಯಾಹ್ನ ಶಿವಾಜಿನಗರದಲ್ಲಿ ಆರೆಸ್ಸೆಸ್ ಪಥಸಂಚಲನದಲ್ಲಿ ಪಾಲ್ಗೊಂಡು ಮನೆಗೆ ವಾಪಸ್ ಹೋಗುವ ವೇಳೆ ರುದ್ರೇಶ್ ಅವರು ಕೊಲೆಯಾಗಿದ್ದರು. ಪಲ್ಸರ್ ಬೈಕ್'ನಲ್ಲಿ ಬಂದ ಇಬ್ಬರು ಆರೋಪಿಗಳು ಕತ್ತಿಯಿಂದ ಹೊಡೆದು ರುದ್ರೇಶ್'ರನ್ನು ಹತ್ಯೆಗೈದಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ರುದ್ರೇಶ್ ಅವರ ಕೊಲೆಗೆ ವೈಯಕ್ತಿಕ ಧ್ವೇಷ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.

Latest Videos
Follow Us:
Download App:
  • android
  • ios