ಆರ್‌ಎಸ್‌ಎಸ್-ಬಿಜೆಪಿ ದೇಶ ಒಡೆಯುತ್ತಿದೆ: ರಾಹುಲ್ ಗಾಂಧಿ

BJP-RSS have divided the country: Rahul Gandhi
Highlights

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೇಶವನ್ನು ಬಿಜೆಪಿ ಮತ್ತು ಸಂಘ ಒಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಉದ್ಯೋಗವಕಾಶ ಸೃಷ್ಟಿ ಮಾಡಿ ಯುವ ಜನತೆಗೆ ಕೌಶಲ್ಯಗಳ ತರಬೇತಿ ನೀಡುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ ಎಂದು ರಾಹುಲ್ ಸಲಹೆ ನೀಡಿದ್ದಾರೆ.

ಹೊಸದಿಲ್ಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೇಶವನ್ನು ಬಿಜೆಪಿ ಮತ್ತು ಸಂಘ ಒಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

'ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಜನರನ್ನು ಒಡೆಯುತ್ತಿದೆ. ಇತರೆ ಹಿಂದುಳಿದ ವರ್ಗದ ಜನರನ್ನು ಬೇರ್ಪಡಿಸುತ್ತಿದೆ,' ಎಂದು ಒಬಿಸಿ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಹೇಳಿದರು.

ಜನರ ವಾಕ್ ಸ್ವಾತಂತ್ರ್ಯವನ್ನೇ ಬುದ್ಧಿವಿಕಲ್ಪವೆಂದು ಬಿಂಬಿಸಲಾಗುತ್ತಿದ್ದು, ಬಿಜೆಪಿ ಜನ ಪ್ರತಿನಿಧಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಧೈರ್ಯವೇ ಇಲ್ಲ, ಎಂದು ಆರೋಪಿಸಿದ್ದಾರೆ.

'ನಮ್ಮ ಇಡೀ ದೇಶವೇ 2-3 ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್ನ ಗುಲಾಮಿತನಕ್ಕೆ ಒಳಗಾಗುತ್ತಿದೆ. ಸಂಸದರು ಸಹ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಒಂದು ವೇಳೆ ಮಾತನಾಡಲು ಮುಂದಾದರೆ ಆರ್ ಎಸ್ ಎಸ್ ನಾಯಕರು ಬಿಡುತ್ತಿಲ್ಲ. ಬಿಜೆಪಿ ಸಹ ಸಂಸದರ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ರಾಹುಲ್ ವಾಗ್ದಾಳಿ ಮಾಡಿದ್ದಾರೆ. 

ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದ ಲಿಂಗಾಯತ ಮುಖಂಡ!

ನೈಜ ಕೆಲಸ ಮಾಡುತ್ತಿರುವವರ ಪರಿಸ್ಥಿತಿ ದೇಶದಲ್ಲಿ ಚಿಂತಾಜನಕವಾಗಿದೆ. ಕಾರ್ಮಿಕರಿಗೆ ಸಕಲ ಸೌಲಭ್ಯಗಳು ಸಿಗುತ್ತಿಲ್ಲ. ನೈಜ ಕೆಲಸ ಮಾಡುವವರನ್ನು ತೆರೆಮರೆಗೆ ಕಳಿಸುವ ನಿರಂತರ ಯತ್ನ ನಡೆಯುತ್ತಲೇ ಬರುತ್ತಿದೆ. ಕೆಲಸ ಮತ್ತು ಕೆಲಸಕ್ಕೆ ತಕ್ಕ ಗೌರವ ದೇಶದಲ್ಲಿ ಮರೆಯಾಗುತ್ತಿದ್ದು ಯಾರದ್ದೋ ಪರಿಶ್ರಮದ ಫಲವನ್ನು ಇನ್ಯಾರೋ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನರೇಂದ್ರ ಮೋದಿ ಉದ್ದುಮೆದಾರರ ಪರವಾಗಿಯೇ ಕೆಲಸ ಮಾಡುತ್ತಿದ್ದು ರೈತರಿಗೆ ಸಂಕಷ್ಟಕ್ಕೆ ನೆರವಾಗುವ ಒಂದು ಯೋಜನೆಯಿಲ್ಲ. ರೈತರ ಹಿತ ಕಡೆಗಣಿಸಿದ ಸರಕಾರ ಉದ್ದಿಮೆದಾರರ 2.5 ಕೋಟಿ ರು. ಸಾಲ ಮನ್ನಾ ಮಾಡಿದೆ. ನರೇಂದ್ರ ಮೋದಿ ಅವರ ಕಚೇರಿಯಲ್ಲಿ ರೈತರನ್ನು ಕಾಣಲು ಸಾಧ್ಯವೇ ಇಲ್ಲ. ರೈತ ಸಾಲದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಾಲ ಮನ್ನಾ ಕುರಿತಾಗಿ ಕೇಂದ್ರ ಸರಕಾರ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಭಾರತದಲ್ಲಿ ಕೌಶಲ್ಯ ತರಬೇತಿಯ ಕೊರತೆಯಿದೆ. ಉದ್ಯೋಗವಕಾಶ ಸೃಷ್ಟಿ ಮಾಡಿ ಯುವ ಜನತೆಗೆ ಕೌಶಲ್ಯಗಳ ತರಬೇತಿ ನೀಡುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

loader