ಈಗ ರಾಹುಲ್ ವಿರುದ್ಧ ಬಿಜೆಪಿ ಸೂಟ್-ಬೂಟ್ ಟೀಕೆ

First Published 1, Feb 2018, 9:20 AM IST
BJP Returns suit boot fire at Rahul Gandhi over jacket
Highlights

ಮೋದಿ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದ ರಲ್ಲಿ 63,000 ಸಾವಿರ ರು. ಬೆಲೆಯ ಬರ್ಬೆರಿ ಜಾಕೆಟ್ ಹಾಕಿಕೊಂಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ನವದೆಹಲಿ: ಮೋದಿ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದ ರಲ್ಲಿ 63,000 ಸಾವಿರ ರು. ಬೆಲೆಯ ಬರ್ಬೆರಿ ಜಾಕೆಟ್ ಹಾಕಿಕೊಂಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಮಂಗಳವಾರ ಶಿಲ್ಲಾಂಗ್‌ನಲ್ಲಿ ಆಯೋಜಿಸಿದ್ದ ಫೆಸ್ಟಿವಲ್ ಆಫ್ ಪೀಸ್ ಸಂಗೀತ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ನೀಲಿ ಬಣ್ಣದ ಜೀನ್ಸ್ ಮತ್ತು ಕಪ್ಪು ಜಾಕೆಟ್ ಹಾಕಿಕೊಂಡಿದ್ದರು. ಬಿಜೆಪಿ ಮೇಘಾಲಯ ಘಟಕ ರಾಹುಲ್ ಟ್ವೀಟರ್‌ನಲ್ಲಿ ಎರಡು ಚಿತ್ರಗಳನ್ನು ಪ್ರಕಟಿಸಿ, ರಾಹುಲ್ ಗಾಂಧಿ ಅವರು ಧರಿಸಿದ್ದ ಬರ್ಬೆರಿ ಜಾಕೆಟ್‌ನ ಬೆಲೆ 63,400 ರು. ಎಂದು ಹೇಳಿಕೊಂಡಿದೆ.

ಆದರೆ, ಬಿಜೆಪಿಯ ಟೀಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌಧುರಿ, ‘ರಾಹುಲ್ ಗಾಂಧಿ ಅವರು ಧರಿಸಿದ್ದು, 63 ಸಾವಿರ ರು.ನ ಜಾಕೆಟ್ ಅಲ್ಲ. ಇಂಥ ಜಾಕೆಟ್ 700 ರು.ಗೆ ದೊರೆಯುತ್ತದೆ. ಮೋದಿಗೆ ಬೇಕಿದ್ದರೂ ತರಿಸಿಕೊಡುತ್ತೇನೆ’ ಎಂದು ಹೇಳಿದ್ದಾರೆ.

2015ರ ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ನರೇಂದ್ರ ಮೋದಿ ಅವರದ್ದು ಸೂಟು ಬೂಟಿನ ಸರ್ಕಾರ ಎಂದು ರಾಹುಲ್ ಟೀಕಿಸಿದ್ದರು. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಭೇಟಿಯ ವೇಳೆ ಮೋದಿ ಅವರು ತಮ್ಮ ಹೆಸರನ್ನು ಚಿನ್ನದ ಅಕ್ಷರದಲ್ಲಿ ಬರೆದಿದ್ದ ಸೂಟ್ ಧರಿಸಿದ್ದಾರೆ. ಚಾಯ್‌ವಾಲಾ ಆಗಿದ್ದ ಮೋದಿ 15 ಲಕ್ಷದ ಸೂಟ್ ಧರಿಸಲು ಆರಂಭಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

loader