ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದ ಕರ್ನಾಟಕದ ಐಪಿಎಸ್ ಅಧಿಕಾರಿ ವಿರುದ್ಧ ಬಿಜೆಪಿ ಗರಂ ಆಗಿದೆ. 

ಶಬರಿಮಲೆ : 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಭೇಟಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಡರಂಗದ ಕಾರ್ಯಕರ್ತರ ಮೇಲೆ ಯತೀಶ್‌ ಚಂದ್ರ ಲಾಠಿ ಪ್ರಹಾರ ಮಾಡಿಸಿ ಗಮನ ಸೆಳೆದಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಡರಂಗದ ಆಕ್ರೋಶಕ್ಕೂ ಗುರಿಯಾಗಿದ್ದರು. ಆ ಸಂದರ್ಭದಲ್ಲಿ ಯತೀಶ್‌ ನಡೆಯನ್ನು ಬಿಜೆಪಿ ಸಮರ್ಥಿಸಿಕೊಂಡಿತ್ತು. ಇದೀಗ ಬಿಜೆಪಿ ಸಚಿವರ ಜತೆ ಯತೀಶ್‌ ವಾಗ್ವಾದ ನಡೆಸಿರುವುದು ಆ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. 

ಕಾಂಗ್ರೆಸ್ಸಿನ ರಮೇಶ್‌ ಚೆನ್ನಿತ್ತಲ ಶಬರಿಮಲೆಗೆ ಹೋದಾಗ ಯತೀಶ್‌ ಗುಲಾಮರಂತೆ ಕೆಲಸ ಮಾಡಿದ್ದರು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಎನ್‌. ರಾಧಾಕೃಷ್ಣನ್‌ ಟೀಕಿಸಿದ್ದಾರೆ. ಆದರೆ ಯತೀಶ್‌ ಅವರನ್ನು 2015ರಲ್ಲಿ ‘ಹುಚ್ಚು ನಾಯಿ’ ಎಂದಿದ್ದ ಎಡರಂಗ, ಇದೀಗ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುತ್ತಿದೆ.