ಕೊನೆಗೂ ಉರುಳಿ ಬಿತ್ತು ರಾಜ್ಯ ಸಮ್ಮಿಶ್ರ ಸರ್ಕಾರ| ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆ| 6 ಮತಗಳಿಂದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ| ಸರ್ಕಾರ ಪತನದ ಪ್ರಹಸನವನ್ನು ‘ಗೇಮ್ ಆಫ್ ಕರ್ಮ’  ಎಂದ ಬಿಜೆಪಿ| 

ಬೆಂಗಳೂರು(ಜು.23): ರಾಜ್ಯ ಮೈತ್ರಿ ಸರ್ಕಾರ ಪತನವಾಗಿದ್ದು, ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆ 6 ಮತಗಳಿಂದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಿದೆ.

Scroll to load tweet…

ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಪತನದ ಪ್ರಹಸನವನ್ನು ‘ಗೇಮ್ ಆಫ್ ಕರ್ಮ’ ಎಂದು ಬಣ್ಣಿಸಿದೆ. ಸರ್ಕಾರ ತನ್ನದೇ ತಪ್ಪುಗಳಿಂದ ಪತನಗೊಂಡಿದ್ದು, ಇದರಿಂದ ರಾಜ್ಯದ ಜನತೆ ದೀರ್ಘ ಕಾಲದ ರಾಜಕೀಯ ಪ್ರಹಸನ ನೋಡುವಂತಾಯಿತು ಎಂದು ಟ್ವೀಟ್ ಮಾಡಿದೆ.

Scroll to load tweet…

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇದೇ ಗುರುವಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ೆಂಬ ಮಾತು ಕೇಳಿ ಬರುತ್ತಿದ್ದು, ಈ ಕುರಿತು ಪಕ್ಷ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.