ಬೆಂಗಳೂರಿನಲ್ಲಿ ಇಂದು ಕೇಸರಿ ಕಹಳೆ ಮೊಳಗುತ್ತಿದೆ. ಇಲ್ಲಿನ ಜೆಪಿ ನಗರದ ಆರ್'ಬಿಐ ಲೇಔಟ್'ನಲ್ಲಿ ಸಮಾವೇಶವನ್ನು ನಡೆಸಲಾಗುತ್ತಿದೆ.
ಬೆಂಗಳೂರು(ಡಿ.10): ಬೆಂಗಳೂರಿನಲ್ಲಿ ಇಂದು ಕೇಸರಿ ಕಹಳೆ ಮೊಳಗುತ್ತಿದೆ. ಇಲ್ಲಿನ ಜೆಪಿ ನಗರದ ಆರ್'ಬಿಐ ಲೇಔಟ್'ನಲ್ಲಿ ಸಮಾವೇಶವನ್ನು ನಡೆಸಲಾಗುತ್ತಿದೆ.
ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಅಡಿಯಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ರಾಜ್ಯದ ಪ್ರಮುಖ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದಾರೆ. ಕೇಂದ್ರ ಸಚಿವರಾದ ಸದಾನಂದ ಗೌಡ, ಬಿ.ಎಸ್ ಯಡಿಯೂರಪ್ಪ, ಸಿ.ಟಿ ರವಿ ಸೇರಿದಂತೆ ಅನೇಕ ಮುಖಂಡರು ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಈಗಾಗಲೇ ಸಮಾವೇಶದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರೂ ಕೂಡ ಪಾಲ್ಗೊಂಡಿದ್ದಾರೆ.
ಈಗಾಗಲೇ ರಾಜ್ಯದಾದ್ಯಂತ ಪರಿವರ್ತನಾ ರ್ಯಾಲಿಯನ್ನು ನಡೆಸುವ ಮೂಲಕ ಪ್ರಚಾರ ಕಾರ್ಯ ನಡೆಸಿದ್ದ ಬಿಜೆಪಿ ಇಂದು ಬೆಂಗಳೂರಿನಲ್ಲಿ ಸಮಾವೇಶವನ್ನು ನಡೆಸುತ್ತಿದೆ.
