ಹಿಂದೂಪರ ಕಾರ್ಯಕರ್ತರ ಹತ್ಯೆ ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ

BJP Protest today against Hindu Karyakartas Murder
Highlights

ಬಿಜೆಪಿ ಕಾರ್ಯಕರ್ತರ ಹತ್ಯೆಗಳು ರಾಜ್ಯದಲ್ಲಿ   ಮೇಲಿಂದ ಮೇಲೆ ಆಗುತ್ತಿದೆ. ಆದರೆ  ಸರ್ಕಾರ ಯಾವುದೇ  ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಇವತ್ತು  ರಾಜ್ಯಾದ್ಯಂತ  ಪ್ರತಿಭಟನೆ  ಹಮ್ಮಿಕೊಂಡಿದೆ.  

ಬೆಂಗಳೂರು (ಫೆ.02): ಬಿಜೆಪಿ ಕಾರ್ಯಕರ್ತರ ಹತ್ಯೆಗಳು ರಾಜ್ಯದಲ್ಲಿ   ಮೇಲಿಂದ ಮೇಲೆ ಆಗುತ್ತಿದೆ. ಆದರೆ  ಸರ್ಕಾರ ಯಾವುದೇ  ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಇವತ್ತು  ರಾಜ್ಯಾದ್ಯಂತ  ಪ್ರತಿಭಟನೆ  ಹಮ್ಮಿಕೊಂಡಿದೆ.  

ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂದೂಪರ ಕಾರ್ಯಕರ್ತರ  ಹತ್ಯೆಗಳನ್ನು ಖಂಡಿಸಿ ಇಂದು  ಬೆಂಗಳೂರು  ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.  ಬಿಜೆಪಿ ಕಾರ್ಯಕರ್ತರಾಗಿದ್ದ ರುದ್ರೇಶ್,   ದೀಪಕ್​ ರಾವ್ ,  ಸಂತೋಷ್​  ಹತ್ಯೆಗಳಿಂದ   ಆಕ್ರೋಶಗೊಂಡಿರುವ  ಬಿಜೆಪಿ,  ಬೆಳಗ್ಗೆ ಶಿವಾಜಿ ನಗರದ ದಂಡು ಮಾರಿಯಮ್ಮ ದೇವಸ್ಥಾನದ  ಬಳಿ  ಬೃಹತ್​ ಪ್ರತಿಭಟನೆ ನಡೆಸಲಿದೆ.  ಮಾಜಿ ಡಿಸಿಎಂ  ಆರ್ . ಅಶೋಕ್ , ಮಾಜಿ  ಸಚಿವ ಅರವಿಂದ ಲಿಂಬಾವಳಿ  ಪ್ರತಿಭಟನೆಯಲ್ಲಿ  ಭಾಗಿಯಾಗಲಿದ್ದಾರೆ.

ಇತ್ತೀಚಿಗೆ ರಾಜಕೀಯ ಪ್ರೇರಿತ ಹತ್ಯೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೋಲೀಸರ ಮನೆಗಳಿಗೇ ನುಗ್ಗಿ ದರೋಡೆ ಮಾಡಲಾಗ್ತಿದೆ ಆದರೂ ಕೂಡಾ ಸರ್ಕಾರ ನಿದ್ರಾವಸ್ಥೆಯಲ್ಲಿದೆ.  ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಲು ಕಾಂಗ್ರೆಸ್ ಸರಕಾರವೇ ನೇರ ಕಾರಣ . ಹಾಗಾಗಿ ಸಿದ್ದರಾಮಯ್ಯನವರೇ ಇನ್ನೆಷ್ಟು ಕೊಲೆಗಳು ಬೇಕು ಅನ್ನೊ ಘೋಷವಾಕ್ಯದಡಿ ಇಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ.

loader