ರಮ್ಯಾ, ರಾಮಲಿಂಗಾರೆಡ್ಡಿಗೆ ಹಾರ್ಲಿಕ್ಸ್, ನಶೆಡಬ್ಬ, ಸ್ಕ್ರೂಡೈವರ್ ರವಾನೆ

BJP Protest Against Ramya
Highlights

, ರಮ್ಯಾ ಹೆಸರಿನಲ್ಲಿ ರಂಇದ್ದು ವಿದೇಶಗಳಿಗೆ ಹೋಗಿ ಮೋಜು- ಮಸ್ತಿ ಮಾಡುವ ಅವರಿಗೆ ಪ್ರಧಾನಿಗಳ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ

ಚಾಮರಾಜನಗರ(ಫೆ.06): ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಮಾಜಿ ಸಂಸದೆ ರಮ್ಯಾ ಹಾಗೂ ಬೆಂಗಳೂರಿನ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಹಾರ್ಲಿಕ್ಸ್, ನಶೆಡಬ್ಬ, ಸ್ಕ್ರೂಡೈವರ್ ಪೋಸ್ಟ್ ಮಾಡುವ ಮೂಲಕ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಚ್.ಎಂ. ಪ್ರಣಯ್ ಮಾತನಾಡಿ, ರಮ್ಯಾ ಹೆಸರಿನಲ್ಲಿ ‘ರಂ’ ಇದ್ದು ವಿದೇಶಗಳಿಗೆ ಹೋಗಿ ಮೋಜು- ಮಸ್ತಿ ಮಾಡುವ ಅವರಿಗೆ ಪ್ರಧಾನಿಗಳ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತ ಸಂತೋಷ್ ಅವರ ಕೊಲೆಗೆ ಸಂಬಂಧಿಸಿದಂತೆ ಹಂತಕರು ಸ್ಕ್ರೂ ಡೈವರ್‌ನಲ್ಲಿ ಚುಚ್ಚಿದ್ದಾರೆ, ಕೊಲೆ ಮಾಡಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ನೋಡಿದರೆ ಅವರ ದೇಹದಲ್ಲಿನ ಸ್ಕ್ರೂಗಳೇ ಸಡಿಲಗೊಂಡಿವೆ. ಬಿಜೆಪಿ ಯುವ ಮೋರ್ಚಾದಿಂದ ಸ್ಕ್ರೂಡ್ರೈವರ್ ಕಳುಹಿಸಿದ್ದೇವೆ. ದೇಹದಲ್ಲಿನ ಸ್ಕ್ರೂಗಳನ್ನು ಟೈಟ್ ಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದರು.

loader