ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಸಂಸದರೂ ಆದ ಹಣಕಾಸು ವ್ಯವಹಾರಗಳ ಸ್ಥಾಯಿ ಸಮಿತಿ ಸದಸ್ಯ ಎಂ.ವೀರಪ್ಪ ಮೊಯ್ಲಿ ಅವರಿಗೆ ಬಿಜೆಪಿ ಸಂಸದರೊಬ್ಬರು ಹಕ್ಕುಚ್ಯುತಿ ನೋಟಿಸ್‌ ಜಾರಿ ಮಾಡಿದ್ದಾರೆ.

ನವದೆಹಲಿ[ನ.23]: ‘ನೋಟು ರದ್ದತಿಯಿಂದ ರೈತರಿಗೆ ಹೊಡೆತವಾಗಿದೆ’ ಎಂದು ಕೃಷಿ ಸಚಿವಾಲಯ ತಮಗೆ ವರದಿ ಸಲ್ಲಿಸಿದೆ ಎಂದು ಹೇಳಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಸಂಸದರೂ ಆದ ಹಣಕಾಸು ವ್ಯವಹಾರಗಳ ಸ್ಥಾಯಿ ಸಮಿತಿ ಸದಸ್ಯ ಎಂ.ವೀರಪ್ಪ ಮೊಯ್ಲಿ ಅವರಿಗೆ ಬಿಜೆಪಿ ಸಂಸದರೊಬ್ಬರು ಹಕ್ಕುಚ್ಯುತಿ ನೋಟಿಸ್‌ ಜಾರಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ಸಮಿತಿಯ ಸದಸ್ಯರೂ ಆದ ಸಂಸದ ನಿಶಿಕಾಂತ ದುಬೆ ಅವರು ಲೋಕಸಭೆ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಅವರಿಗೆ ನೋಟಿಸ್‌ ರವಾನಿಸಿದ್ದು, ಮೊಯ್ಲಿ ವಿರುದ್ಧ ಹಕ್ಕುಚ್ಯುತಿ ಕೋರಿಕೆ ಸಲ್ಲಿಸಿದ್ದಾರೆ. ‘ಗೌಪ್ಯವಾಗಿ ಇಡಬೇಕಾದ ಕೃಷಿ ಸಚಿವಾಲಯದ ವರದಿಯನ್ನು ಟ್ವೀಟರ್‌ ಮೂಲಕ ಮೊಯ್ಲಿ ಬಹಿರಂಗಪಡಿಸಿದ್ದು ಹಕ್ಕುಚ್ಯುತಿಯಾಗಿದೆ’ ಎಂದು ದುಬೆ ಆರೋಪಿಸಿದ್ದಾರೆ.

‘ನೋಟು ರದ್ದತಿಯಿಂದಾಗಿ ರೈತರಿಗೆ ಭಾರಿ ಸಮಸ್ಯೆಯಾಗಿತ್ತು ಎಂದು ಸ್ವತಃ ಕೇಂದ್ರ ಕೃಷಿ ಸಚಿವಾಲಯವೇ ಒಪ್ಪಿಕೊಂಡಿದೆ’ ಎಂದು ಬುಧವಾರ ಮೊಯ್ಲಿ ಟ್ವೀಟ್‌ ಮಾಡಿದ್ದರು.