ನವದೆಹಲಿ, [ನ.24]: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತ್ತೊಂದೆಡೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಗಳು ಜೋರಾಗಿವೆ.  

ಈ ನಡುವೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನವದೆಹಲಿಯಲ್ಲರಿವ ಜಾಮಾ ಮಸೀದಿ ಬಗ್ಗೆ ವಿವದಾತ್ಮ ಹೇಳಿಕೆ ನೀಡಿದ್ದು, ಈ ಹೇಳಿಕೆ ಫುಲ್ ವೈರಲ್ ಆಗಿದೆ.

ನವದೆಹಲಿಯಲ್ಲಿರುವ ಜಾಮಾ ಮಸೀದಿಯನ್ನು ಕೆಡವಿ, ಅದರಡಿಯಲ್ಲಿ ಹಿಂದು ದೇವರ ವಿಗ್ರಹಗಳು ಲಭಿಸದಿದ್ದರೆ ನನ್ನನ್ನು ನೇಣಿಗೇರಿಸಿ ಎಂದು ಮಹಾರಾಜ್ ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಸಾಕ್ಷಿ ಮಹಾರಾಜ್ ಅವರು, ಜಾಮಾ ಮಸೀದಿ ಹಿಂದೆ ದೇಗುಲವಾಗಿತ್ತು. ಮೊಘಲರು ಅದನ್ನು ಕೆಡವಿ, ಮಸೀದಿ ನಿರ್ವಿುಸಿದ್ದಾರೆ. ಹಾಗಾಗಿ, ಅಲ್ಲಿ ಹುಡುಕಿದರೆ, ದೇವರ ವಿಗ್ರಹಗಳು ಸಿಗುತ್ತವೆ ಎಂದು ಹೇಳಿದ್ದರು. 

ಈಗಲೂ ತಾವು ಆ ಮಾತಿಗೆ ಬದ್ಧವಾಗಿರುವುದಾಗಿ  ಘಂಟಾಘೋಷವಾಗಿ  ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಪಕ್ಷದ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.