ನೆರೆಯನ್ನು ತಡೆಯುವ ನಿಟ್ಟಿನಲ್ಲಿ ಸರಾಯೂ ನದಿಗೆ ಕಟ್ಟಲಾದ ತಡೆಗೋಡೆಯನ್ನು ಪರಿಶೀಲಿಸಲು ತೆರಳಿದ್ದ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಬಾಟಲನ್ನು ನೀರಿಗೆಸೆದಿದ್ದು ಭಾರೀ ಟೀಕೆಗೊಳಗಾಗಿದೆ.

ಗೋಂಡಾ, ಉತ್ತರ ಪ್ರದೇಶ: ಪ್ರಧಾನಿ ಮೋದಿಯ ಸ್ವಚ್ಛ ಭಾರತದ ಕರೆಯನ್ನು ಪಕ್ಷದ ಸಂಸದೆಯೇ ಗಾಳಿಗೆ ತೂರಿದ ಘಟನೆ ಉತ್ತರ ಪ್ರದೇಶದ ಗೋಂಡಾದಲ್ಲಿ ನಡೆದಿದೆ.

Scroll to load tweet…

ನೆರೆಯನ್ನು ತಡೆಯುವ ನಿಟ್ಟಿನಲ್ಲಿ ಸರಾಯೂ ನದಿಗೆ ಕಟ್ಟಲಾದ ತಡೆಗೋಡೆಯನ್ನು ಪರಿಶೀಲಿಸಲು ತೆರಳಿದ್ದ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಬಾಟಲನ್ನು ನೀರಿಗೆಸೆದಿದ್ದು ಭಾರೀ ಟೀಕೆಗೊಳಗಾಗಿದೆ.

ತಡೆಗೋಡೆ ಪರಿಶೀಲನೆಗಾಗಿ ಪ್ರಿಯಾಂಕ ಅಧಿಕಾರಿಗಳ ತಂಡದೊಂದಿಗೆ ಕೈಯಲ್ಲಿ ಪ್ಲಾಸಿಟ್ಇಕ್ ಬಾಟಲಿಯನ್ನು ಹಿಡಿದುಕೊಂಡು ದೋಣಿಯನ್ನು ಹತ್ತಿದ್ದಾರೆ. ಬಳಿಕ ಅದನ್ನೇನು ಮಾಡಬೇಕೆಂದು ತೋಚದೆ, ನದಿಗೆಸೆದು ಬಿಟ್ಟಿದ್ದಾರೆ.

ಸ್ವಚ್ಛ ಭಾರತ ಹಾಗೂ ಗಂಗಾ ಶುದ್ಧಿಕರಣದ ಬಗ್ಗೆ ಒತ್ತು ನೀಡುವ ಬಿಜೆಪಿಗೆ, ಸಂಸದೆಯ ಈ ವರ್ತನೆ ಮುಜುಗರ ಉಂಟುಮಾಡಿದೆ.