ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಬಿಜೆಪಿ - ಆರ್‌ಎಸ್‌ಎಸ್ ಉಗ್ರವಾದ ಮಾಡುತ್ತಿವೆ ಎನ್ನುತ್ತಿದ್ದಾರೆ. ನಾಯಕ ಹುಚ್ಚನಾದಾಗ ಅವರ ಹಿಂಬಾಲಕರೂ ಹುಚ್ಚರಾಗಲೇಬೇಕಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ[ಆ.24]: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯುವಕರು ಐಸಿಸ್ ಸೇರಲು ಮತ್ತು ದೇಶದ ಅನೇಕ ಕೊಲೆ ನಡೆಯಲು ಭಾರತದ ನಿರುದ್ಯೋಗ ಕಾರಣ ಎನ್ನುವ ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಆವರೊಬ್ಬ ಅಪ್ರಬುದ್ಧ ನಾಯಕ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ ಎಂದು ವಾಗ್ದಾಳಿ ನಡೆಸಿದರು.

ಇದರೊಂದಿಗೆ ರಾಹುಲ್ ಪೆದ್ದು ಪೆದ್ದಾಗಿ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಬಿಜೆಪಿ - ಆರ್‌ಎಸ್‌ಎಸ್ ಉಗ್ರವಾದ ಮಾಡುತ್ತಿವೆ ಎನ್ನುತ್ತಿದ್ದಾರೆ. ನಾಯಕ ಹುಚ್ಚನಾದಾಗ ಅವರ ಹಿಂಬಾಲಕರೂ ಹುಚ್ಚರಾಗಲೇಬೇಕಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಇಂದಿರಾ ಗಾಂಧಿ ತೀರಿಕೊಂಡಾಗ ಅವರ ಮಗ ರಾಜೀವ್ ಗಾಂಧಿ ಅವರು ಇಂದಿರಾ ಅವರ ಅಸ್ಥಿಯನ್ನು ಹಿಡಿದುಕೊಂಡು ನಮ್ಮವ್ವ ಸತ್ತಿದ್ದಾಳೆಂದು ಮತ ಕೇಳಿದ್ದರು. ನಾವು ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ಇಟ್ಟುಕೊಂಡು ಓಟು ಕೇಳಲು ಹೊರಟಿಲ್ಲ. ಕಾಂಗ್ರೆಸ್ ನವರಿಗೆ ನಮ್ಮ ಬಗ್ಗೆ ಮಾತನಾಡುವುದಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.