ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಜನ್ಮ ದಿನವಾದ ನ.14ರಂದು ರಾಷ್ಟ್ರಾದ್ಯಂತ ಆಚರಿಸಲಾಗುವ ಮಕ್ಕಳ ದಿನಾಚರಣೆಯನ್ನು ಡಿಸೆಂಬರ್‌ 26ಕ್ಕೆ ಬದಲಾವಣೆ ಮಾಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನವಾದ ನ.14ರಂದು ರಾಷ್ಟ್ರಾದ್ಯಂತ ಆಚರಿಸಲಾಗುವ ಮಕ್ಕಳ ದಿನಾಚರಣೆಯನ್ನು ಡಿಸೆಂಬರ್ 26ಕ್ಕೆ ಬದಲಾವಣೆ ಮಾಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ನೆಹರೂ ಅವರನ್ನು ಮಕ್ಕಳು ಚಾಚಾ ಎನ್ನುತ್ತಿದ್ದರು. ಹೀಗಾಗಿ ನೆಹರೂ ಜನ್ಮದಿನವಾದ ನ.14ಕ್ಕೆ ಮಕ್ಕಳ ದಿನ ಆಚರಿಸುವುದು ಸರಿಯಲ್ಲ. ಅದರ ಬದಲು ಅ.14ರ ದಿನವನ್ನು ಚಾಚಾ ದಿನ ಅಥವಾ ಅಂಕಲ್ ಡೇ ಅಚರಿಸಬೇಕು.
ಇನ್ನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಗುರು ಗೋವಿಂದ್ ಸಿಂಗ್ ಅವರ ನಾಲ್ವರು ಮಕ್ಕಳ ಸ್ಮರಣೆಗಾಗಿ, ಅವರು ಹುತಾತ್ಮರಾದ ಡಿ.26ರ ದಿನವನ್ನು ಮಕ್ಕಳ ದಿನವಾಗಿ ಆಚರಿಸಬೇಕು ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಅವರ ಅವರ ಈ ಕೋರಿಕೆ ಪತ್ರಕ್ಕೆ 60 ಮಂದಿ ಸಹಿ ಹಾಕಿದ್ದಾರೆ.
