ಬಿಜೆಪಿ ಶಾಸಕ ರಾಜು ಕಾಗೆ ಕುಟುಂಬದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಶಾಸಕ ರಾಜು ಕಾಗೆ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಭೀಮಾಶಂಕರ ಗ್ರಾಮದಲ್ಲಿ 13 ಆರೋಪಿಗಳ ಪೈಕಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು(ಜ.19): ಬಿಜೆಪಿ ಶಾಸಕ ರಾಜು ಕಾಗೆ ಕುಟುಂಬದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಶಾಸಕ ರಾಜು ಕಾಗೆ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಭೀಮಾಶಂಕರ ಗ್ರಾಮದಲ್ಲಿ 13 ಆರೋಪಿಗಳ ಪೈಕಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಶಾಸಕ ರಾಜುಕಾಗೆ, ಅವರ ಪುತ್ರಿ ಶೋಭಾ ಕಾಗೆ, ಸಹೋದರ ಶಿವಗೌಡ ಕಾಗೆ, ಶಿವಗೌಡ ಕಾಗೆ ಪತ್ನಿ ಹಾಗೂ ರಾಜು ಕಾಗೆ ಚಾಲಕ ನನ್ನು ಬಂಧಿಸಲಾಗಿದೆ. ಜನವರಿ 1 ರಂದು ಕಾಂಗ್ರೆಸ್ ಕಾರ್ಯಕರ್ತ ವಿವೇಶ್ ಶೆಟ್ಟಿ ಮನೆಗೆ ನುಗ್ಗಿದ ಶಾಸಕ ರಾಜುಕಾಗೆ ಪಟಾಲಂ, ವಿವೇಕ್ ಶೆಟ್ಟಿಯನ್ನು ಮನಬಂದಂಥೆ ಥಳಿಸಿತ್ತು. 

ಈ ಪ್ರಕರಣ ಸಂಬಂಧ ಶಾಸಕ ರಾಜು ಕಾಗೆ ಸೇರಿದಂತೆ 13 ಆರೋಪಿಗಳ ವಿರುದ್ಧ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ 10 ದಿನಗಳ ಬಳಿಕ 13 ಆರೋಪಿಗಳ ಪೈಕಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.