ಎಡಾಳಿತ ಪ್ರಭಲವಾಗಿದ್ದ ತ್ರಿಪುರಾದಲ್ಲೂ ಬಿಜೆಪಿ ಅಧಿಕಾರಕ್ಕೆ

First Published 28, Feb 2018, 7:49 AM IST
BJP May Win In Tripura Next Election
Highlights

ದೇಶದ 29 ರಾಜ್ಯಗಳ ಪೈಕಿ 19 ರಾಜ್ಯಗಳಲ್ಲಿ ನೇರವಾಗಿ ಇಲ್ಲವೇ ಎನ್‌ಡಿಎ ಮಿತ್ರಪಕ್ಷಗಳ ಮೂಲಕ ಅಧಿಕಾರದಲ್ಲಿರುವ ಬಿಜೆಪಿ, ಇದೀಗ ಈಶಾನ್ಯದ ಮತ್ತೊಂದು ರಾಜ್ಯ ತ್ರಿಪುರಾವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ.

ನವದೆಹಲಿ: ದೇಶದ 29 ರಾಜ್ಯಗಳ ಪೈಕಿ 19 ರಾಜ್ಯಗಳಲ್ಲಿ ನೇರವಾಗಿ ಇಲ್ಲವೇ ಎನ್‌ಡಿಎ ಮಿತ್ರಪಕ್ಷಗಳ ಮೂಲಕ ಅಧಿಕಾರದಲ್ಲಿರುವ ಬಿಜೆಪಿ, ಇದೀಗ ಈಶಾನ್ಯದ ಮತ್ತೊಂದು ರಾಜ್ಯ ತ್ರಿಪುರಾವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ.

 ಅಷ್ಟುಮಾತ್ರವಲ್ಲ, ಕೆಲವೇ ವರ್ಷಗಳ ಹಿಂದಿನವರೆಗೂ ಕಮಲದ ಪಕ್ಷದ ಪಾಲಿಗೆ ಗಗನ ಕುಸುಮವೇ ಆಗಿದ್ದ ನಾಗಾಲ್ಯಾಂಡ್‌ ಮತ್ತು ಮೇಘಾಲಯಗಳಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಮಂಗಳವಾರ ಪ್ರಕಟಗೊಂಡ ಎರಡು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ಜನ್‌ ಕೀ ಬಾತ್‌- ನ್ಯೂಸ್‌ ಎಕ್ಸ್‌ ಸಮೀಕ್ಷೆ ಅನ್ವಯ, ಎಡ ಪಕ್ಷಗಳ ಆಡಳಿತದ ತ್ರಿಪುರಾದಲ್ಲಿ ಬಿಜೆಪಿ- ಐಪಿಎಫ್‌ಟಿ ಮೈತ್ರಿಕೂಟ 35-45 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಎಡಪಕ್ಷಗಳು ಕೇವಲ 14-23 ಸ್ಥಾನ ಗೆಲ್ಲಲಿದೆ. ಇನ್ನು ಆ್ಯಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಅನ್ವಯ, ತ್ರಿಪುರಾದಲ್ಲಿ 44-50 ಸ್ಥಾನಗಳಿಸುವ ಮೂಲಕ ಅಧಿಕಾರಕ್ಕೆ ಬರಲಿದೆ. ಎಡಪಕ್ಷಗಳು ಕೇವಲ 9-15 ಸ್ಥಾನ ಗೆಲ್ಲಲಿದೆ. ಆದರೆ ಸಿ- ವೋಟರ್‌ ಸಮೀಕ್ಷೆ ಡಪಕ್ಷಗಳು 26-34 ಸ್ಥಾನ, ಬಿಜೆಪಿ ಮೈತ್ರಿಕೂಟ 24-32 ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ.

 

loader