Asianet Suvarna News Asianet Suvarna News

ಒಂದೇ ವರ್ಷದಲ್ಲಿ ಬಿಜೆಪಿಯ 5 ಪ್ರಭಾವಿ ನಾಯಕರ ನಿಧನ

ಕಳೆದೊಂದು ವರ್ಷದ ಅವಧಿಯಲ್ಲಿ ಬಿಜೆಪಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಂತಾಗಿದೆ. ಅಟಲ್‌ ಬಿಹಾರಿ ವಾಜಪೇಯಿ, ಅನಂತ್‌ ಕುಮಾರ್‌, ಮನೋಹರ್‌ ಪರ್ರಿಕರ್‌ ಹಾಗೂ ಸುಷ್ಮಾ ಸ್ವರಾಜ್‌ ಅವರ ನಿಧನದ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಹಿರಿಯ ನಾಯಕ ಜೇಟ್ಲಿ ಅಗಲಿಕೆ ಬಿಜೆಪಿಗೆ ಇನ್ನೊಂದು ಆಘಾತ ತಂದೊಡ್ಡಿದೆ.

BJP losses 5 Leaders in One Year
Author
Bengaluru, First Published Aug 25, 2019, 12:42 PM IST

ನವದೆಹಲಿ [ಆ.25]: ಅರುಣ್‌ ಜೇಟ್ಲಿ ಅವರ ನಿಧನದೊಂದಿಗೆ ಕಳೆದೊಂದು ವರ್ಷದ ಅವಧಿಯಲ್ಲಿ ಬಿಜೆಪಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಂತಾಗಿದೆ. ಅಟಲ್‌ ಬಿಹಾರಿ ವಾಜಪೇಯಿ, ಅನಂತ್‌ ಕುಮಾರ್‌, ಮನೋಹರ್‌ ಪರ್ರಿಕರ್‌ ಹಾಗೂ ಸುಷ್ಮಾ ಸ್ವರಾಜ್‌ ಅವರ ನಿಧನದ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಹಿರಿಯ ನಾಯಕ ಜೇಟ್ಲಿ ಅಗಲಿಕೆ ಬಿಜೆಪಿಗೆ ಇನ್ನೊಂದು ಆಘಾತ ತಂದೊಡ್ಡಿದೆ. ಈ ಧುರೀಣರೆಲ್ಲಾ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ. ಅಡ್ವಾಣಿ ಕಾಲದ ಎರಡನೇ ಹಂತದ ಪ್ರಭಾವಿ ನಾಯಕರಾಗಿದ್ದಾರೆ.

ದೀರ್ಘಕಾಲಿನ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು 2018ರ ಆಗಸ್ಟ್‌ 16ರಂದು ನಿಧನರಾಗಿದ್ದರು. ಆರು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ಅಗಲಿಕೆಗೆ ಇಡೀ ದೇಶವೇ ಸಂತಾಪ ಸೂಚಿಸಿತ್ತು.

ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಕರ್ನಾಟಕದ ರಾಜಕಾರಣಿ ಅನಂತ್‌ ಕುಮಾರ್‌ (59) ಅವರು 2018ರ ನವೆಂಬರ್‌ 12ರಂದು ನಿಧನರಾಗಿದ್ದರು. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನಂತ್‌ ಕುಮಾರ್‌ ಅವರಿಗೆ ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇವರಿಬ್ಬರ ಅಗಲಿಕೆಯನ್ನು ಅರಗಿಸಿಕೊಳ್ಳುವ ಹೊತ್ತಿನಲ್ಲೇ ಬಿಜೆಪಿಗೆ ಇನ್ನೊಂದು ಆಘಾತ ಎದುರಾಗಿತ್ತು. ರಕ್ಷಣಾ ಸಚಿವರಾಗಿ ಪಾಕಿಸ್ತಾನ ಮೇಲೆ ಸರ್ಜಿಕಲ್‌ ಸ್ಟೆ್ರೖಕ್‌ನ ರೂವಾರಿಯಾಗಿದ್ದ ಮನೋಹರ್‌ ಪರ್ರಿಕರ್‌ (64) 2019ರ ಮಾಚ್‌ರ್‍ 17ರಂದು ನಿಧನರಾದರು. ಪರ್ರಿಕರ್‌ ದೀರ್ಘ ಕಾಲದಿಂದ ಕ್ಯಾನ್ಸರ್‌ನಿಂದ ಬಳುತ್ತಿದ್ದ ಪರ್ರಿಕರ್‌ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಅವರು ವಾಪಸ್‌ ಆಗಿದ್ದರು.

ಈ ಮೂವರು ನಾಯಕರ ನಿಧನದ ಬಳಿಕ ಬಿಜೆಪಿ ಲೋಕಸಭೆ ಚುನಾವಣೆಯನ್ನು ಎದುರಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಿತು. ಅದಾದ ಕೆಲವೇ ತಿಂಗಳಿನಲ್ಲಿ ಅಂದರೆ 2019ರ ಆಗಸ್ಟ್‌ 6 ರಂದು ಸುಷ್ಮಾ ಸ್ವರಾಜ್‌ (67) ಹೃದಯಸ್ತಂಭನದಿಂದ ನಿಧನರಾದರು. ಹೀಗೆ ಬಿಜೆಪಿ ಒಂದು ವರ್ಷದ ಅಂತರದಲ್ಲೇ ಐವರು ನಾಯಕರನ್ನು ಕಳೆದುಕೊಂಡಿದೆ.

Follow Us:
Download App:
  • android
  • ios