ನವದೆಹಲಿ[ಆ.09]: ತೀವ್ರ ಕುತೂಹಲ ಕೆರಳಿಸಿದ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ.

ರಾಜ್ಯಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ನಡಿಗ ಬಿ.ಕೆ. ಹರಿಪ್ರಸಾದ್ ಅವರನ್ನು 20 ಮತಗಳ ಅಂತರದಿಂದ ಸೋಲಿಸಿದರು. ಹರಿವಂಶ್ ಅವರಿಗೆ 125 ಮತಗಳು ಲಭಿಸಿದರೆ, ಹರಿಪ್ರಸಾದ್ 105 ಮತಗಳನ್ನು ಪಡೆದುಕೊಂಡರು. ಹರಿವಂಶ್ ಆಡಳಿತರೂಢ ಎನ್ ಡಿಎಯಿಂದ ಸ್ಪರ್ಧಿಸಿದ್ದು ಜೆಡಿಯುನ ರಾಜ್ಯ ಸಭಾ ಸದಸ್ಯರಾಗಿದ್ದಾರೆ. 

ಪಿ.ಜೆ. ಕುರಿಯನ್ ಅವರು ಕಳೆದ ಜೂನ್ ತಿಂಗಳಲ್ಲಿ ನಿವೃತ್ತರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ನೂತನ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರನ್ನುಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಒಟ್ಟು 232 ಸದಸ್ಯರಲ್ಲಿ 230 ಸದಸ್ಯರು ಮತ ಚಲಾಯಿಸಿದರು. ಅಮ್ ಆದ್ಮಿ ಹಾಗೂ ವೈಎಸ್ ಆರ್ ಸಿಪಿ ಪಕ್ಷದ ಇಬ್ಬರು ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. 

ಈ ಸುದ್ದಿಯನ್ನು ಓದಿ : ಇಂದು ರಾಜ್ಯಸಭೆ ಉಪಸಭಾಪತಿ ಚುನಾವಣೆ: ವಿಪಕ್ಷಗಳಿಂದ ಕನ್ನಡಿಗ ಸ್ಪರ್ಧೆ