Asianet Suvarna News Asianet Suvarna News

ಇಂದು ರಾಜ್ಯಸಭೆ ಉಪಸಭಾಪತಿ ಚುನಾವಣೆ: ವಿಪಕ್ಷಗಳಿಂದ ಕನ್ನಡಿಗ ಸ್ಪರ್ಧೆ

ಎನ್‌ಡಿಎ ಗೆಲುವು ಸಾಧ್ಯತೆ: 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ನೇತೃತ್ವದ ಎನ್‌ಡಿಎಗೆ ಬಹುಮತವಿಲ್ಲ. ಹೀಗಾಗಿ ಅನ್ಯ ಪಕ್ಷಗಳನ್ನು ಅದು ನೆಚ್ಚಿಕೊಂಡಿದೆ. ಎನ್ ಡಿಎಗೆ ಬಹುಮತವಿಲ್ಲ ಎಂಬುದನ್ನೇ ಪ್ರತಿಪಕ್ಷಗಳ ಕೂಟವು ‘ಬಂಡವಾಳ’ ಮಾಡಿಕೊಂಡಿದೆ. 

Rajya Sabha deputy chairperson election Today : BK Hariprasad contested from opposition
Author
Bengaluru, First Published Aug 9, 2018, 9:37 AM IST

ನವದೆಹಲಿ[ಆ.09]: ತೀವ್ರ ಕುತೂಹಲ ಮೂಡಿಸಿರುವ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ವಿರುದ್ಧ ಪ್ರತಿಪಕ್ಷದ ಅಭ್ಯರ್ಥಿಯಾಗಿ ಕರ್ನಾಟಕದ ಸಂಸದ ಬಿ.ಕೆ. ಹರಿಪ್ರಸಾದ್ ಅವರು ಸೆಣಸಲಿದ್ದಾರೆ. ಪಿ.ಜೆ. ಕುರಿಯನ್ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಚುನಾವಣೆ ನಡೆಲಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಮತದಾನ ನಿಗದಿಯಾಗಿದೆ.

ಉಭಯ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರತಿಪಕ್ಷಗಳಿಂದ ಎನ್‌ಸಿಪಿ ಸಂಸದೆ ವಂದನಾ ಚವಾಣ್ ಅಭ್ಯರ್ಥಿಯಾಗಬಹುದು ಎನ್ನಲಾಗಿತ್ತಾದರೂ ಕೊನೇ ಕ್ಷಣದಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೂಚಿತ ಅಭ್ಯರ್ಥಿಯಾಗಿ ಹರಿಪ್ರಸಾದ್ ಹೊರಹೊಮ್ಮಿದರು.

‘ಕಾಂಗ್ರೆಸ್ ಪಕ್ಷವು ಅಳೆದೂ ತೂಗಿ ಈ ನಿರ್ಧಾರ ಕೈಗೊಂಡಿರಬಹುದು. ಎಲ್ಲ ಪ್ರತಿಪಕ್ಷಗಳೊಂದಿಗೆ ಮಾತನಾಡಿ ಮತ ಹಾಕುವಂತೆ ಕೋರುತ್ತೇನೆ’ ಎಂದು ಘೋಷಣೆ ಹೊರಬಿದ್ದ ಬಳಿಕ ಹರಿಪ್ರಸಾದ್ ತಿಳಿಸಿದರು.

Rajya Sabha deputy chairperson election Today : BK Hariprasad contested from opposition

ಇದೇ ವೇಳೆ, ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಆನಂದ ಶರ್ಮಾ ಮಾತನಾಡಿ, ‘ರಾಜ್ಯಸಭೆಯಲ್ಲಿ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಪ್ರತಿಪಕ್ಷವೂ ಸ್ಪರ್ಧೆಗಿಳಿಯಬೇಕಾಯಿತು’ ಎಂದರು. 

ಎನ್‌ಡಿಎ ಗೆಲುವು ಸಾಧ್ಯತೆ:

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ನೇತೃತ್ವದ ಎನ್‌ಡಿಎಗೆ ಬಹುಮತವಿಲ್ಲ. ಹೀಗಾಗಿ ಅನ್ಯ ಪಕ್ಷಗಳನ್ನು ಅದು ನೆಚ್ಚಿಕೊಂಡಿದೆ. ಎನ್ ಡಿಎಗೆ ಬಹುಮತವಿಲ್ಲ ಎಂಬುದನ್ನೇ ಪ್ರತಿಪಕ್ಷಗಳ ಕೂಟವು ‘ಬಂಡವಾಳ’ ಮಾಡಿಕೊಂಡಿದೆ. ಬಹುಮತಕ್ಕೆ 123 ಸದಸ್ಯಬಲ ಬೇಕು. ಆದರೆ, ಎನ್‌ಡಿಎಗೆ ಶಿವಸೇನೆ ಬೆಂಬಲ ಘೋಷಣೆ ಮಾಡಿದೆ. ಜತೆಗೆ ಬಿಜು ಜನತಾದಳ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಕೂಡ ಬೆಂಬಲಿಸುವ ಸಾಧ್ಯತೆ ಇದೆ.ಹೀಗಾಗಿ ತನ್ನ ಬಳಿ 129 ಮತಗಳಿವೆ ಎಂದು ಎನ್‌ಡಿಎ ಹೇಳಿಕೊಳ್ಳುತ್ತಿದ್ದು, ಜಯದ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಮತ್ತೊಂದೆಡೆ ಪಿಡಿಪಿ ಕೂಡಾ ಮತದಾನಕ್ಕೆ ಗೈರಾಗುವ ಮೂಲಕ ಎನ್‌ಡಿಎಗೆ ನೆರವಾಗಲಿದೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಪ್ರತಿಪಕ್ಷಗಳ ಬಳಿ 116 ಸದಸ್ಯರು ಮಾತ್ರ ಇದ್ದಾರೆ ಎನ್ನಲಾಗಿದೆ.

ಇದೇ ವೇಳೆ ಬಿಜೆಡಿ ಹಾಗೂ ಶಿವಸೇನೆ ಬೆಂಬಲಿಸಿದರೆ ಮಾತ್ರ ಸ್ಪರ್ಧಿಸುವೆ ಎಂದಿದ್ದ ವಂದನಾ ಚವಾಣ್ ಅವರು ಈ ಎರಡೂ ಪಕ್ಷಗಳು ಕೈಕೊಡುವ ಸಾಧ್ಯತೆ ನೋಡಿ, ಉಮೇದುವಾರಿಕೆಯಿಂದ ಹಿಂದೆ ಸರಿದರು. ಹೀಗಾಗಿ ಇಬ್ಬರ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ರಾಜ್ಯಸಭೆ ಉಪಸಭಾಪತಿ ಚುನಾವಣೆ
ಸಂಭಾವ್ಯ ಮತಗಳು
ಒಟ್ಟು ಬಲ 245
ಬಹುಮತಕ್ಕೆ 123
ಎನ್‌ಡಿಎ 129
ಪ್ರತಿಪಕ್ಷ 116

ಬಿಜೆಪಿ ಲೆಕ್ಕಾಚಾರ ಏನು?
ಎನ್‌ಡಿಎ ಮಿತ್ರರ 91 ಮತ, ನಾಮನಿರ್ದೇಶನ ಗೊಂಡ 3 ಸದಸ್ಯರ ಮತ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್‌ಸಿಂಗ್, ಎಐಎಡಿಎಂಕೆ ಯ 13, ಟಿಆರ್‌ಎಸ್‌ನ 6, ವೈಎಸ್‌ಆರ್‌ನ 2, ಐಎನ್‌ಎಲ್‌ಡಿಯ 1 ಮತ್ತು ಬಿಜೆಡಿಯ 9 ಮತ ಸೇರಿ 126 ಮತ ತನಗೆ ಬೀಳಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಕಾಂಗ್ರೆಸ್ ಲೆಕ್ಕಾಚಾರ?
ಯುಪಿಎ ಸದಸ್ಯರ 61, ಟಿಎಂಸಿಯ 13, ಎಸ್‌ಪಿಯ 13, ಟಿಡಿಪಿಯ 6, ಸಿಪಿಎಂನ 5, ಬಿಎಸ್‌ಪಿ ಮತ್ತು ಡಿಎಂಕೆಯ ತಲಾ 4, ಸಿಪಿಐನ 2, ಜೆಡಿಎಸ್‌ನ 1, ಓರ್ವ ಸ್ವತಂತ್ರ ಮತ್ತು ಓರ್ವ ನಾಮನಿರ್ದೇಶಿತ ಅಭ್ಯರ್ಥಿಯ ಬೆಂಬಲ ಸೇರಿ 111 ಮತ ತನಗೆ ಸಿಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಉಳಿದಂತೆ ಬಿಜೆಡಿ ಸೇರಿ ಇತರೆ ಸಣ್ಣಪುಟ್ಟ ಪಕ್ಷಗಳು ತನ್ನನ್ನು ಬೆಂಬಲಿಸಿವೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
 

Follow Us:
Download App:
  • android
  • ios