ಶಿಷ್ಯನ ಜೀವನ ಕತೆ ತೆರೆ ಮೇಲೆ ಆಸ್ವಾದಿಸಿದ ಬಿಜೆಪಿ ಭೀಷ್ಮ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 4:20 PM IST
BJP Leaders including l k advani Watch Movie Inspired By PM Modi Childhood
Highlights

ಪ್ರಧಾನಿ ನರೇಂದ್ರ ಮೋದಿ ಬಾಲ್ಯದ ಜೀವನ ಆಧಾರಿತ ಕಿರು ಚಿತ್ರವೊಂದನ್ನು ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಆದಿಯಾಗಿ ಪ್ರಮುಖ ಬಿಜೆಪಿ ನಾಯಕರು ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದಲ್ಲಿ ಅಂಥದ್ದೇನಿದೆ?

ನವದೆಹಲಿ[ಜು.27]  ಪ್ರಧಾನಿ ನರೇಂದ್ರ ಮೋದಿ ಬಾಲ್ಯದ ಜೀವನದ ಆಧಾರಿತ, ಬಾಲ್ಯದಿಂದ ಸ್ಫೂರ್ತಿ ಪಡೆದ ಕತೆ ಆಧಾರಿತ ಸಿನಿಮಾವೊಂದನ್ನು  ಬಿಜೆಪಿಯ ಹಿರಿಯ ನಾಯಕರು ಸಂಸತ್ ನ ಗ್ರಂಥಾಲಯದಲ್ಲಿ ವೀಕ್ಷಣೆ ಮಾಡಿದರು.

ಕೇಂದ್ರ ಸಚಿವ ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ರಾಜ್‌ನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೆರಿತಂತೆ ಪ್ರಮುಖರು 32 ನಿಮಿಷದ ‘ಚಲೋ ಜೀತೆ ಹೈನ್’ ಎಂಬ ಕಿರು ಚಿತ್ರವನ್ನು ವೀಕ್ಷಿಸಿದರು.

ಅಡ್ವಾಣಿ-ಮೋದಿ ನಡುವೆ ಇದೆಯಾ ಮುನಿಸು? ಇಬ್ಬರ ನಡುವೆ ಇದೆಯಾ ಅಸಮಾಧಾನದ ಪರದೆ?

ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಹ ಸಿನಿಮಾವನ್ನು ಮಂಗಳವಾರವೇ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದರು. ಒಬ್ಬ ದಲಿತ ಹುಡುಗ ತನ್ನ ವಿದ್ಯಾಭ್ಯಾಸಕ್ಕಾಗಿ, ಪುಸ್ತಕ ಕೊಳ್ಳಲು ಹೇಗೆ ಹೋರಾಟ ಮಾಡುತ್ತಾನೆ ಎಂಬುದೇ ಚಿತ್ರದ ಪ್ರಮುಖ ಕಥಾ ಹಂದರ.

loader