ಅಡ್ವಾಣಿ-ಮೋದಿ ನಡುವೆ ಇದೆಯಾ ಮುನಿಸು? ಇಬ್ಬರ ನಡುವೆ ಇದೆಯಾ ಅಸಮಾಧಾನದ ಪರದೆ?

First Published 27, Feb 2018, 12:30 PM IST
is their is difference of opinion between modi and Advani
Highlights

ಮೋದಿ, ಅಡ್ವಾಣಿ ಮತ್ತು ಪರದೆ ಕಳೆದ ವಾರ ಹೊಸದಾಗಿ ನಿರ್ಮಿಸಲಾಗಿರುವ ಬಿಜೆಪಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಬಹಳ ಖುಷಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಸಾಹೇಬರು ತಮ್ಮ ಭಾಷಣದ ಕೊನೆಗೆ ಉದ್ಘಾಟನೆಯ ಪರದೆ ಸರಿಸುವಾಗ ಮಾತ್ರ ಸ್ವಲ್ಪ ತಾಂತ್ರಿಕ ತೊಂದರೆಗಳಿಂದ ಬೇಸರಗೊಂಡಿದ್ದರಂತೆ.

ಬೆಂಗಳೂರು (ಫೆ. 27): ಮೋದಿ, ಅಡ್ವಾಣಿ ಮತ್ತು ಪರದೆ ಕಳೆದ ವಾರ ಹೊಸದಾಗಿ ನಿರ್ಮಿಸಲಾಗಿರುವ ಬಿಜೆಪಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಬಹಳ ಖುಷಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಸಾಹೇಬರು ತಮ್ಮ ಭಾಷಣದ ಕೊನೆಗೆ ಉದ್ಘಾಟನೆಯ ಪರದೆ ಸರಿಸುವಾಗ ಮಾತ್ರ ಸ್ವಲ್ಪ ತಾಂತ್ರಿಕ ತೊಂದರೆಗಳಿಂದ ಬೇಸರಗೊಂಡಿದ್ದರಂತೆ.

ಪರದೆ ಎಳೆಯುವಾಗ ಮೋದಿ ಒಂದು ಕಡೆಯಿಂದ ಎಳೆಯುತ್ತಿದ್ದರೆ, ಅಡ್ವಾಣಿ ಇನ್ನೊಂದು ಕಡೆ ಎಳೆಯುತ್ತಿದ್ದರಿಂದ ಸಿಕ್ಕಿಕೊಂಡ ಪರದೆಯ ಒಂದು ಭಾಗವನ್ನು ರಾಜನಾಥ್ ಸಿಂಗ್ ಕೈಯಿಂದ ಪಕ್ಕಕ್ಕೆ ಸರಿಸಬೇಕಾಯಿತು.  ದೂರದಲ್ಲಿ ಕುಳಿತು ರಾಜಕೀಯ ರೂಪಕಗಳೊಂದಿಗೆ ಎಲ್ಲವನ್ನೂ ನೋಡಬಯಸುವ ಪೊಲಿಟಿಕಲ್ ಪತ್ರಕರ್ತರಿಗೆ  2019 ರಲ್ಲಿ ಮೋದಿ ಸಾಹೇಬರಿಗೆ ಹೀಗೆ ಆಗಬಹುದಾ ಎನಿಸಿದ್ದು ತಪ್ಪಲ್ಲ! ಕರ್ಣ ಎಷ್ಟೇ ಶೂರ ವೀರನಾಗಿ ಹೋರಾಡಿದರೂ  ಕೂಡ ರಥದ ಚಕ್ರ ಸಿಕ್ಕಿಹಾಕಿಕೊಂಡಿದ್ದೇ ಸೋಲಿಗೆ ಕಾರಣವಾಯ್ತು ಎಂಬುದು ಇತಿಹಾಸವಲ್ಲವೇ? 

-ಪ್ರಶಾಂತ್ ನಾತು, 

ದೆಹಲಿ ರಾಜಕೀಯದ ಬಗ್ಗೆ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ ಇಂಡಿಯಾ ಗೇಟ್ 

loader