ಕಲಬುರಗಿ ಕ್ಷೇತ್ರದ ಬಿಜೆಪಿ ಸಭೆಯಲ್ಲಿ ಮಾರಾಮಾರಿ - ಇಬ್ಬರಿಗೆ ಗಾಯ: ಆಸ್ಪತ್ರೆಗೆ ದಾಖಲು

First Published 11, Mar 2018, 8:03 AM IST
BJP Leaders Clash In Kalaburagi
Highlights

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆಯ ವೇಳೆ ಎರಡು ಕಾರ್ಯಕರ್ತರ ಗುಂಪುಗಳ ನಡುವೆ ಪರಸ್ಪರ ಮಾರಾಮಾರಿ ನಡೆದಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿವೆ.

ಕಲಬುರಗಿ: ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆಯ ವೇಳೆ ಎರಡು ಕಾರ್ಯಕರ್ತರ ಗುಂಪುಗಳ ನಡುವೆ ಪರಸ್ಪರ ಮಾರಾಮಾರಿ ನಡೆದಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿವೆ.

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕಲಬುರಗಿ ಉಸ್ತುವಾರಿ ಡಾ.ಲಕ್ಷ್ಮಣ ಸೇರಿ ಹಲವು ಮುಖಂಡರು ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸುತ್ತಿದ್ದರು. ಈ ವೇಳೆ ಕೆಲವರು ಗ್ರಾಮೀಣ ಕಲಬುರಗಿಯಲ್ಲಿ ಬಿಜೆಪಿ ಮೂಲ ಹಾಗೂ ಹೊರಗಿನಿಂದ ಬಂದ ಕಾಯಕರ್ತರ ನಡುವಿನ ತಿಕ್ಕಾಟವನ್ನು ಪ್ರಸ್ತಾಪಿಸಿದರು. ಈ ವೇಳೆ ಮತ್ತೊಂದು ಗುಂಪು ವಿಷಯ ಪ್ರಸ್ತಾಪಿಸಿದವರ ವಿರುದ್ಧ ಹಲ್ಲೆಗೆ ಮುಂದಾಯಿತು.

ಇದರಿಂದ ಎರಡೂ ಗುಂಪುಗಳ ನಡುವೆ ಜಿಲ್ಲಾ ಉಸ್ತುವಾರಿಗಳ ಸಮ್ಮುಖದಲ್ಲೇ ಮಾರಾಮಾರಿ ನಡೆದಿದೆ. ಬಳಿಕ ಹಿರಿಯ ನಾಯಕ ರೇವೂನಾಯಕ್‌ ಬೆಳಮಗಿ ಮತ್ತಿತರರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ನಿಯಂತ್ರಿಸಿದ್ದಾರೆ.

ಮಾರಾಮಾರಿಯಲ್ಲಿ ಶಿವಲಿಂಗಪ್ಪ ತೆಂಗಳಿ ಉಪಳಾಂವ್‌ ಸೌಕಾರ ಅವರಿಗೆ ತೀವ್ರ ಗಾಯಗಳಾಗಿದ್ದು, ಜಯದೇಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮಹೇಶ್‌ ಔರಾದ್‌ ಸೇರಿ ಹಲವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

loader