ಇಂದು ನಡೆಯುತ್ತಿರುವ ಬಿಜೆಪಿ ಸಭೆಯಲ್ಲಿ ಸುಳ್ಳು ಹೇಳಿ ಶಾಸಕರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಬೆಂಗಳೂರು: ಇಂದು ನಡೆಯುತ್ತಿರುವ ಬಿಜೆಪಿ ಸಭೆಯಲ್ಲಿ ಸುಳ್ಳು ಹೇಳಿ ಶಾಸಕರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಉಸ್ತುವಾರಿ ನಿಗದಿಪಡಿಸಿದ ಕ್ಷೇತ್ರಗಳಿಗೆ 4 ಬಾರಿ ಭೇಟಿ ಎಂದು ಸುಳ್ಳು ಹೇಳಿದ ಶಾಸಕರಿಗೆ ಬಿಜೆಪಿ ರಾಷ್ಟ್ರೀಯ ನಾಯಕರು ಶಾಕ್ ನೀಡಿದ್ದಾರೆ.

17 ಮಂದಿ ಶಾಸಕರು ಕೇವಲ ಒಂದೇ ಸಲ ಭೇಟಿ ನೀಡಿದ್ದಾರೆ ಎಂದು ಸಭೆಯಲ್ಲಿ ದಾಖಲೆ ತೋರಿಸುವ ಮೂಲಕ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸುಳ್ಳು ಹೇಳಿದ ಶಾಸಕರನ್ನು ಪೇಚಿಗೆ ಸಿಲುಕಿಸಿದ್ದಾರೆ.

ಸಂಸದರು ಮತ್ತು ಶಾಸಕರ ರಾಜಕೀಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುವ ಅಮಿತ್ ಶಾ ಮತ್ತು ಟೀಂ ರಾಜ್ಯ ಬಿಜೆಪಿಯ ಎಲ್ಲಾ ಪದಾಧಿಕಾರಿಗಳ ಮೇಲೆ ನಿಗಾ ಇಟ್ಟಿರುವುದು ಈ ಮೂಲಕ ಬಹಿರಂಗವಾಗಿದೆ.