ಹೊಸಕೋಟೆ ಬೈ ಎಲೆಕ್ಷನ್ ಟಿಕೆಟ್: ಶರತ್ ದಂಗಲ್...ಎಂಟಿಬಿ ಕಂಗಾಲ್..!

ಒಂದೆಡೆ ಅನರ್ಹ ಶಾಸಕರ ಕಗ್ಗಂಟು ಬಿಜೆಪಿಗೆ ತಲೆ ನೋವಾಗಿದ್ದರೆ, ಇತ್ತ ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಆಂತರಿಕ ಅಸಮಾಧನ ಕೂಡ ಸ್ಫೋಟಗೊಂಡಿದೆ.

BJP Leader Sharath Bachegowda Supporters protest At BSY residence Bengaluru For Hoskote by poll ticket

ಬೆಂಗಳೂರು, (ಸೆ. 24): ಹೊಸಕೋಟೆ ಕ್ಷೇತ್ರ ಉಪಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಉಪಚುನಾವಣೆ ಬಿಜೆಪಿ ಟಿಕೆಟ್‌ಗಾಗಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರನ ಬೆಂಗಲಿಗರು ಬೀದಿಗಿಳಿದಿದ್ದಾರೆ.

ಹೊಸಕೋಟೆಯಲ್ಲಿ ಎಂಟಿಬಿಗೆ ಬಚ್ಚೇಗೌಡ ಪುತ್ರ ಸವಾಲ್

 ಶರತ್ ಬಚ್ಚೇಗೌಡ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಎಂಟಿಬಿ ನಾಗರಾಜು ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು.

ಆದ್ರೆ ಬಿಜೆಪಿ ಟಿಕೆಟ್ ಶರತ್ ಬಚ್ಚೇಗೌಡ ಬದಲಿಗೆ ವಿರೋಧಿ ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಾಗರಾಜು ಅಥವಾ ಅವರ ಪುತ್ರನಿಗೆ ನೀಡಲಾಗುತ್ತಿದೆ. ಇದು ಶರತ್ ಬಚ್ಚೇಗೌಡ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿದ್ದು, ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆ ಮುಂದೆ ಇಂದು (ಮಂಗಳವಾರ)  ಪ್ರತಿಭಟನೆ ನಡೆಸಿದರು. 

ಯಾವುದೇ ಕಾರಣಕ್ಕೂ ಬಿಜೆಪಿ ವಿರೋಧಿಗೆ ಟಿಕೆಟ್ ನೀಡಬಾರದು.  ಶರತ್ ಬಚ್ಚೇಗೌಡ್ರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಆಗ್ರಹಿಸಿದರು.  ಸಂಸದ ಬಚ್ಚೇಗೌಡ ಅವರು ಯಡಿಯೂರಪ್ಪ ಮನವಿಯಂತೆ ಪುತ್ರ ಶರತ್ ಬಚ್ಚೇಗೌಡ ಬೆಂಬಲಿಗರನ್ನು  ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರಾದರೂ ಯಾವುದೇ ಫಲ ನೀಡಲಿಲ್ಲ.  ಇದ್ರಿಂದ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ.

ಶರತ್‌ಗೆ ಕೈ ಟಿಕೆಟ್ ಆಫರ್
ಹೌದು...ಕಾಂಗ್ರೆಸ್‌ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್‌ ನೀಡಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಒಂದು ವೇಳೆ ಎಂಟಿಬಿಗೆ ಮಣೆ ಹಾಕಿದರೆ, ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದು ಖಚಿತ ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಶರತ್‌ ಜತೆ ಒಂದು ಸುತ್ತಿನ ಮಾತುಕತೆಯೂ ಮಾಡಿ ಮುಗಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶರತ್ ಬಚ್ಚೇಗೌಡ, ಬಿಜೆಪಿ ವಿರೋಧಿಗಳಿಗೆ ಟಿಕೆಟ್ ನೀಡಬಾರದು. ಒಂದು ವೇಳೆ ನೀಡಿದರೆ ಕಾರ್ಯಕರ್ತರ ಅಭಿಪ್ರಾಯಳೊಂದಿಗೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಬಹಿರಂವಾಗಿಯೇ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಿಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಾಗಿ ಕಣಕ್ಕಿಳಿಯಲು ಪ್ಲಾನ್?
ಬಿಜೆಪಿ ಟಿಕೆಟ್ ದೊರೆಕದ ಪಕ್ಷದಲ್ಲಿ ಪಕ್ಷೇತರನಾಗಿಯಾದರೂ ಚುನಾವಣೆಗೆ ನಿಲ್ಲುವ ಯೋಚನೆಯಲ್ಲಿದ್ದಾರೆ.  ವೇಳೆ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ಪರ್ಧಿಸಿದರೆ ಎಂಟಿಬಿ ನಾಗರಾಜು ಅಥವಾ ಅವರ ಪುತ್ರ ಅಥವಾ ಇನ್ಯಾರೇ ಬಿಜೆಪಿಯಿಂದ ಸ್ಪರ್ಧಿಸಿದರೂ ಗೆಲುವು ಕಷ್ಟಕರವಾಗಲಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

Latest Videos
Follow Us:
Download App:
  • android
  • ios