ಪೊಲೀಸರು ವಶಕ್ಕೆ ಪಡೆಯುತ್ತಿರುವ ವೇಳೆ ಎಳೆದಾಡಿ ಬಸ್ ಒಳಗೆ ತಳ್ಳುತ್ತಿದ್ದಾಗ ಬಸ್ ಬಾಗಿಲು ಹಣೆಯ ಎಡಭಾಗಕ್ಕೆ ತಗುಲಿ ಪೆಟ್ಟಾಯಿತು.

ಬೆಂಗಳೂರು(ಡಿ.27): ಕೆಪಿಸಿಸಿ ಕಚೇರಿ ಎದುರು ಪ್ರತಿಭಟಿಸುತ್ತಿದ್ದ ವೇಳೆ ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್ ಗಾಯಗೊಂಡಿದ್ದಾರೆ.

ಪೊಲೀಸರು ವಶಕ್ಕೆ ಪಡೆಯುತ್ತಿರುವ ವೇಳೆ ಎಳೆದಾಡಿ ಬಸ್ ಒಳಗೆ ತಳ್ಳುತ್ತಿದ್ದಾಗ ಬಸ್ ಬಾಗಿಲು ಹಣೆಯ ಎಡಭಾಗಕ್ಕೆ ತಗುಲಿ ಪೆಟ್ಟಾಯಿತು. ನಂತರ ಅವರನ್ನು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕರೆದೊಯ್ಯಲಾಯಿತು.