ಬೆಂಗಳೂರು(ಆ.09) ಬಿಜೆಪಿ ನಾಯಕ ಮಾಜಿ ಸಚಿವ ಸಚಿವ‌ ಲಕ್ಷ್ಮಣ ಸವದಿ ಅವರನ್ನು ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಸಹ ಉಸ್ತುವಾರಿಯನ್ನಾಗಿ ಬಿಜೆಪಿ ನಿಯುಕ್ತಿಗೊಳಿಸಿದೆ. 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸವದಿ ಅವರಿಗೆ ಹೊಸ ಜವಾಬ್ದಾರಿ ನೀಡಿದ್ದಾರೆ.  ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಭೂಪೆಂದರ್ ಯಾದವ್ ಅವರು ಚುನಾವಣಾ ಉಸ್ತುವಾರಿಯಾಗಿರಲಿದ್ದಾರೆ. 

BSY ಸಚಿವ ಸಂಪುಟ ರಚನೆಗೆ ಡೇಟ್ ಫಿಕ್ಸ್ : ಮೊದಲ ಹಂತದಲ್ಲಿ 14 ಶಾಸಕರ ಪ್ರಮಾಣ ವಚನ

ಲಕ್ಷ್ಮಣ ಸವದಿ ಅವರೊಂದಿಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಕೂಡ ಸಹ ಉಸ್ತುವಾರಿಯಾಗಿಯಾಗಿ ಮಹಾರಾಷ್ಟ್ರ ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಬೆಳಗಾವಿ  ಅಥಣಿ ಭಾಗದ ನಾಯಕಮನಿಗೆ ಬಿಜೆಪಿ ಗಡಿಯ ಮಹಾರಾಷ್ಟ್ರದ ಜವಾಬ್ದಾರಿ ವಹಿಸಿದೆ. ಈ ಮೂಲಲಕ  ಕರ್ನಾಟಕದ ಜತೆ ಲಿಂಕ್ ಹೊಂದಿರುವ ಮಹಾರಾಷ್ಟ್ರದ ಜನರ ಹೆಚ್ಚಿನ ವಿಶ್ವಾಸ ಗಳಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.