ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೆರಳು ತೋರಿಸುವವರ ಬೆರಳು ಅಥವಾ ಕೈಗಳನ್ನು ಕತ್ತರಿಸಬೇಕು ಅಥವಾ ಮುರಿಯಬೇಕು ಎಂಬ ಬಿಹಾರ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಪಟನಾ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೆರಳು ತೋರಿಸುವವರ ಬೆರಳು ಅಥವಾ ಕೈಗಳನ್ನು ಕತ್ತರಿಸಬೇಕು ಅಥವಾ ಮುರಿಯಬೇಕು ಎಂಬ ಬಿಹಾರ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಭಾರೀ ವಿರೋಧ ಮತ್ತು ಖಂಡನೆ ವ್ಯಕ್ತವಾದ ಬೆನ್ನಲ್ಲೇ, ಅವರು ತಮ್ಮ ವಿವಾದಾತ್ಮಕ ಹೇಳಿಕೆಗೆ ವಿಷಾದಿಸಿದ್ದಾರೆ. ಜತೆಗೆ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಸೋಮವಾರ ಸಮಾರಂಭವೊಂದರಲ್ಲಿ

ಮಾತನಾಡಿದ್ದ ನಿತ್ಯಾನಂದ ರಾಯ್, ‘ಬಡ ಕುಟುಂಬದಿಂದ ಬಂದಿರುವ ಪ್ರಧಾನಿ ಮೋದಿ ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಅವರ ವಿರುದ್ಧ ಬೊಟ್ಟು ಮಾಡುವ ಕೈಗಳನ್ನು ಕತ್ತರಿಸಬೇಕು ಅಥವಾ ಮುರಿಯಬೇಕು,’ ಎಂದಿದ್ದರು.

ಇದಕ್ಕೆ ಬಿಹಾರದ ಪ್ರತಿಪಕ್ಷ ಆರ್‌ಜೆಡಿ, ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ರಾಯ್, ‘ನಾನು ಯಾರನ್ನೂ ನೋಯಿಸಲು ಈ ಹೇಳಿಕೆ ನೀಡಿಲ್ಲ. ಈ ಬಗ್ಗೆ ವಿಷಾದಿಸುವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.