ನೀವು ಹೆಂಡ ಕುಡಿಸಿ, ನಾವು ಗುಂಡ್ಲುಪೇಟೆ ಜನರಿಗೆ ಸ್ವಾಭಿಮಾನ ಮೂಡಿಸಿ ಯುದ್ಧ ಗೆಲ್ಲುತ್ತೇವೆ: ತೇಜಸ್ವಿನಿ ರಮೇಶ್

ಮೈಸೂರು (ಮಾ.30): ಉಪಚುನಾವಣಾ ಸಮರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ತೆರಕಣಾಂಬಿಯಲ್ಲಿ ಇಂದು ಬಿಜೆಪಿಯಯಿಂದ ಮಹಿಳಾ ಸಮಾವೇಶ ನಡೆಯಿತು. 

ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ತೇಜಸ್ವಿನಿ ರಮೇಶ್, ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೌರವ ಪಡೆ ನಾಯಕ ಡಿ.ಕೆ.ಶಿವಕುಮಾರ್ ಹಂಗಳ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ನೀವು ಹೆಂಡ ಕುಡಿಸಿ, ನಾವು ಗುಂಡ್ಲುಪೇಟೆ ಜನರಿಗೆ ಸ್ವಾಭಿಮಾನ ಮೂಡಿಸಿ ಯುದ್ಧ ಗೆಲ್ಲುತ್ತೇವೆ ಎಂದು ತೇಜಸ್ವಿನಿ ರಮೇಶ್ ಹೇಳಿದ್ದಾರೆ.