ಲಕ್ನೋ [ಆ.16]:  ಅಣ್ಣ-ತಂಗಿಯರ ಸಂಬಂಧ ಬೆಸೆಯುವ ಹಿಂದೂಗಳ ಸಾಂಪ್ರದಾಯಿಕ ಹಬ್ಬ ರಕ್ಷಾ ಬಂಧನದ ದಿನ ಸೋದರಿಯರು ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. 

ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಭುಕಲ್‌ ನವಾಜ್‌ ರಕ್ಷಾ ಬಂಧನದ ಪ್ರಯುಕ್ತ ಗೋವಿಗೆ ಪೂಜೆ ಸಲ್ಲಿಸಿ ರಾಖಿ ಕಟ್ಟಿದರು. 

ಲಖನೌನ ಕುಬಿಯಾಘಾಟ್‌ನಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳೆಯರು ಮತ್ತು ಪುರುಷರು ಗೋವುಗಳಿಗೆ ರಾಖಿ ಕಟ್ಟಿದರು. ಅಲ್ಲದೆ, ಮಾಂಸಕ್ಕಾಗಿ ಗೋವುಗಳ ವಧೆ ಮಾಡುವುದರ ತಡೆ ಮತ್ತು ಗೋವು ಹಾಗೂ ಮನುಷ್ಯನ ನಡುವಿನ ಬಾಂಧವ್ಯದ ಜಾಗೃತಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರಂತೆ.