ಇಂದಿನಿಂದ 17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ| ಪ್ರಮಾಣವಚನ ಸ್ವೀಕರಿಸುತ್ತಿರುವ ಲೋಕಸಭಾ ನೂತನ ಸಂಸದರು| ಪ್ರಧಾನಿ ಎದ್ದು ನಿಲ್ಲುತ್ತಿದ್ದಂತೇ ‘ಮೋದಿ..ಮೋದಿ..’ಎಂದು ಕೂಗಿದ ಬಿಜೆಪಿ ಸಂಸದರು| ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರಿಂದ ಪ್ರಮಾಣವಚನ ಸ್ವೀಕಾರ| 

ನವದೆಹಲಿ(ಜೂ.17): 17ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದ್ದು, ಲೋಕಸಭೆಗೆ ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.

Scroll to load tweet…

ಈ ವೇಳೆ ಸಂಸತ್ ಸದಸ್ಯರಾಗಿ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಮೋದಿ, ಸದನದ ಗೌರವ ಎತ್ತಿ ಹಿಡಿಯುವ ಮೂಲಕ ಜನರ ಸೇವೆಗೆ ಒತ್ತು ನೀಡುವುದಾಗಿ ಹೇಳಿದರು. ಪ್ರಧಾನಿ ಪ್ರಮಾಣವಚನ ಸ್ವೀಕರಿಸುವ ವೇಳೆ ಬಿಜೆಪಿ ನೂತನ ಸಂಸದರು ‘ಮೋದಿ..ಮೋದಿ..’ ಎಂದು ಕೂಗಿದ್ದು ವಿಶೇಷವಾಗಿತ್ತು.

Scroll to load tweet…

ಪ್ರಮಾಣವಚನ ಸ್ವೀಕರಿಸಲು ಪ್ರಧಾನಿ ಎದ್ದು ನಿಲ್ಲುತ್ತಿದ್ದಂತೇ ‘ಮೋದಿ..ಮೋದಿ..’ಎಂದು ಕೂಗಿ ಬಿಜೆಪಿ ಸಂಸದರು ಕೂಗಿ ಹರ್ಷ ವ್ಯಕ್ತಪಡಿಸಿದರು.

Scroll to load tweet…

ಇದುವರೆಗೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ಹಲವು ಗಣ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ನೂತನ ಸಂಸದರ ಪ್ರಮಾಣವಚನ ಎರಡು ದಿನಗಳ ಕಾಲ ನಡೆಯಲಿದೆ.

Scroll to load tweet…

ಇದೇ ವೇಳೆ ಕೇಂದ್ರದ ಮಾಜಿ ಸಚಿವ ಮತ್ತು ಏಳು ಬಾರಿ ಸಂಸದರಾಗಿರುವ ವಿರೇಂದ್ರ ಕುಮಾರ್ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ವೀರೇಂದ್ರ ಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

Scroll to load tweet…