ಇಂದಿನಿಂದ 17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ| ಅಧಿವೇಶನ ಆರಂಭಿಸಲು ಮೋದಿ 2.0 ಸರ್ಕಾರ ಸಜ್ಜು| ಕಲಾಪದಲ್ಲಿ ಸಕ್ರೀಯವಾಗಿ ಭಾಗವಹಿಸಲು ವಿಪಕ್ಷಗಳಿಗೆ ಮೋದಿ ಮನವಿ| ಸಂಖ್ಯಾಬಲ ಮರೆತು ಕಲಾಪದಲ್ಲಿ ಭಾಗವಹಿಸುವಂತೆ ಕರೆ| ಸಕ್ರೀಯ ವಿರೋಧ ಪಕ್ಷದ ಅಗತ್ಯತೆ ಒತ್ತಿ ಹೇಳಿದ ಪ್ರಧಾನಿ| 

ನವದೆಹಲಿ(ಜೂ.17): 17ನೇ ಲೋಕಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಎಲ್ಲಾ ಸದಸ್ಯರಿಗೆ ಮನವಿ ಮಾಡಿದ್ದಾರೆ.

Scroll to load tweet…

ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತಿನಲ್ಲಿ ಸಕ್ರೀಯ ವಿರೋಧ ಪಕ್ಷದ ಅಗತ್ಯತೆಯನ್ನು ಒತ್ತಿ ಹೇಳಿದರು. ವಿರೋಧ ಪಕ್ಷಗಳು ತಮ್ಮ ಸಂಖ್ಯಾಬಲದ ಕುರಿತು ಆತಂಕಪಡದೇ, ಕಲಾಪದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಮೋದಿ ಮನವಿ ಮಾಡಿದರು. 

Scroll to load tweet…

ವಿರೋಧಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಸದನ ಕಲಾಪ ವೇಳೆ ವಿರೋಧ ಪಕ್ಷಗಳು ಸಕ್ರಿಯವಾಗಿ ಭಾಗವಹಿಸುತ್ತವೆ ಎಂದು ತಾವು ಆಶಿಸುವುದಾಗಿ ಪ್ರಧಾನಿ ನುಡಿದರು. 

Scroll to load tweet…

ಸಂಸತ್ತಿನ ಮೊದಲ ಅಧಿವೇಶನ ಇಂದಿನಿಂದ ಜುಲೈ 26ರವರೆಗೆ ನಡೆಯಲಿದ್ದು, ಮೊದಲೆರಡು ದಿನ ನೂತನವಾಗಿ ಆಯ್ಕೆಯಾಗಿರುವ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜುಲೈ 5ರಂದು ಬಜೆಟ್ ಮಂಡನೆಯಾಗಲಿದೆ.

Scroll to load tweet…

ಈಗಾಗಲೇ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ.

Scroll to load tweet…