ಈ ಕ್ಷೇತ್ರದ ಟಿಕೆಟ್’ಗಾಗಿ ಬಿಜೆಪಿ – ಕೆಜೆಪಿ ನಡುವೆ ತೀವ್ರ ಕಾದಾಟ

First Published 2, Mar 2018, 10:40 AM IST
BJP KJP ticket War
Highlights

ಸಚಿವ ಈಶ್ವರ ಖಂಡ್ರೆ ಪ್ರತಿನಿಧಿಸುತ್ತಿರುವ ಕ್ಷೇತ್ರವಿದು. ಕಾಂಗ್ರೆಸ್ಸಿಂದ ಮತ್ತೊಮ್ಮೆ ಅವರು ಕಣಕ್ಕಿಳಿಯುವುದು ಖಚಿತ. ಆದರೆ ಅವರ ಎದುರಾಳಿಯಾಗಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಬಿಜೆಪಿ ಹಾಗೂ ಕೆಜೆಪಿ ತಿಕ್ಕಾಟ ಇದಕ್ಕೆ ಕಾರಣ.

ಭಾಲ್ಕಿ: ಸಚಿವ ಈಶ್ವರ ಖಂಡ್ರೆ ಪ್ರತಿನಿಧಿಸುತ್ತಿರುವ ಕ್ಷೇತ್ರವಿದು. ಕಾಂಗ್ರೆಸ್ಸಿಂದ ಮತ್ತೊಮ್ಮೆ ಅವರು ಕಣಕ್ಕಿಳಿಯುವುದು ಖಚಿತ. ಆದರೆ ಅವರ ಎದುರಾಳಿಯಾಗಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಬಿಜೆಪಿ ಹಾಗೂ ಕೆಜೆಪಿ ತಿಕ್ಕಾಟ ಇದಕ್ಕೆ ಕಾರಣ.

ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದ ಪ್ರಕಾಶ ಖಂಡ್ರೆ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಪರಿವರ್ತನಾ ರ್ಯಾಲಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ಆದರೆ ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿ ಎರಡನೇ ಸ್ಥಾನ ಪಡೆದಿದ್ದ, ಈಶ್ವರ ಖಂಡ್ರೆ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಡಿ.ಕೆ. ಸಿದ್ರಾಮ್ ಅವರಿಗೆ ಇದು ಬೇಸರ ತರಿಸಿದೆ. ತಮಗೇ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಬಿಜೆಪಿಯಿಂದ ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟು, ಮತ್ತೊಬ್ಬರು ಮುನಿಸಿಕೊಂಡರೆ ಈಶ್ವರ ಖಂಡ್ರೆ ಅವರಿಗೆ ಲಾಭ ಎನ್ನುವ ವಾತಾವರಣವಿದೆ. ಒಗ್ಗಟ್ಟಿನಿಂದ ಬಿಜೆಪಿ ಕಣಕ್ಕಿಳಿದರೆ ಸಚಿವರಿಗೆ ಪ್ರಬಲ ಪೈಪೋಟಿ ಎದುರಾಗಲಿದೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಪ್ರಬಲವಾಗಿಲ್ಲ. ಅಭ್ಯರ್ಥಿ ಘೋಷಣೆಯಾಗಿಲ್ಲ.

loader