ಬೆಂಗಳೂರು(ಸೆ. 28): ಕಳೆದ ವಾರ ವಿಧಾನಮಂಡಲದಲ್ಲಿ ಕೈಗೊಂಡ 'ನಿರ್ಣಯ'ಕ್ಕೆ ಬದ್ಧವಾಗಿರಬೇಕೆಂದು ವಿಪಕ್ಷಗಳು ರಾಜ್ಯ ಸರಕಾರಕ್ಕೆ ಸಲಹೆ ನೀಡಿವೆ. ಪರಿಸ್ಥಿತಿ ಕರ್ನಾಟಕಕ್ಕೆ ಅನುಕೂಲವಾಗಿಲ್ಲ. ಪ್ರಕೃತಿ ಕೂಡ ಪ್ರತಿಕೂಲವಾಗಿದೆ. ಕಾವೇರಿ ಜಲಾಶಯಗಳಲ್ಲಿ ನೀರು ಇಲ್ಲ. ಕುಡಿಯಲಷ್ಟೇ ನೀರು ಬಳಸುತ್ತೇವೆಂಬ 'ನಿರ್ಣಯ'ಕ್ಕೆ ಬದ್ಧವಾಗಿರೋಣ. ನಾಳೆಯವರೆಗೆ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದು ಬೇಡ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಿಳಿಸಿವೆ. ಇಂದು ಸಿಎಂ ಕರೆದ ಸರ್ವಪಕ್ಷ ಸಭೆಯಲ್ಲಿ ವಿಧಾನಮಂಡಲದ 'ನಿರ್ಣಯ'ಕ್ಕೆ ಬದ್ಧವಾಗಿರಲು ಸರ್ವಸಮ್ಮತಿ ವ್ಯಕ್ತವಾಯಿತು. ನಾಳೆ, ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಕಾವೇರಿ ನೀರು ಹಂಚಿಕೆ ಕುರಿತು ಸಂಧಾನ ಸಭೆ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred