Asianet Suvarna News Asianet Suvarna News

ಅತೃಪ್ತರ ಸಹಾಯ ಒಪ್ಪಿಕೊಂಡ ಬಿಜೆಪಿ ನಾಯಕ ? ಮಂತ್ರಿ ಸ್ಥಾನ ಪಕ್ಕಾ!

ರಾಜ್ಯದಲ್ಲಿ ಅತೃಪ್ತರು ತಮಗೆ ಸಹಾಯ ಮಾಡಿದ್ದಾರೆ ಎನ್ನುವುದನ್ನು ಬಿಜೆಪಿ ನಾಯಕರೋರ್ವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.ಅಲ್ಲದೇ ಮಂತ್ರಿ ಸ್ಥಾನ ನೀಡುವ ಬಗ್ಗೆಯೂ ಕೂಡ ಸುಳಿವು ಕೊಟ್ಟಿದ್ದಾರೆ. 

BJP High Command Take Final Decision Over Karnataka Cabinet Say Bellary MLA Sriramulu
Author
Bengaluru, First Published Aug 2, 2019, 1:36 PM IST

ಬಳ್ಳಾರಿ [ಆ.02] : ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆಯಾಗಿ ವಾರಗಳು ಕಳೆದಿದೆ. ಆದರೆ ಇನ್ನೂ ಕೂಡ ಸಚಿವ ಸಂಪುಟ ಮಾತ್ರ ವಿಸ್ತರಣೆಯಾಗಿಲ್ಲ. 

ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಶ್ರೀ ರಾಮುಲು ಸಂಪುಟ ವಿಸ್ತರಣೆ ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧರ ಕೈಗೊಳ್ಳಲಿದೆ ಎಂದರು. 

ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಪ್ರತಿಕ್ರಿಯಿಸಿದ ಶ್ರೀ ರಾಮುಲು ಈ ಬಗ್ಗೆ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಹೈ ಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ನಾನು ಬದ್ಧ. ನಾನು ರಾಜ್ಯಕ್ಕೆ ನಾಯಕ‌ ಯಾವುದೇ ಜಿಲ್ಲೆಗೆ ಸೀಮಿತವಾದ ವ್ಯಕ್ತಿಯಲ್ಲ. ನನ್ನಂತಹ ನಾಯಕರು ಬಹಳ ಬಿಜೆಪಿಯಲ್ಲಿದ್ದಾರೆ ಎಂದರು.

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ನೂತನ ಸಿಎಂ BSY

ಇನ್ನು ಅತೃಪ್ತರಿಗೆ ಬಿಜೆಪಿ ಸ್ಥಾನಮಾನ ನೀಡುವ ಬಗ್ಗೆ ಪರೋಕ್ಷ ಸುಳಿವು ನೀಡಿದ ಶ್ರೀ ರಾಮುಲು, ನಾವು ಮಂತ್ರಿಗಿರಿಗೆ ಲಾಬಿ ‌ಮಾಡಿದರೆ ಅನರ್ಹರನ್ನು ಯಾರು ನೋಡಬೇಕು. ಅವರಿಗೂ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ ಎಂದು ಅವರ ಸಹಾಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.  

ಬಿಎಸ್‌ವೈ ವಿಧಾನಸೌಧಕ್ಕೆ ಬರುವುದನ್ನು ತಿಳಿಯಲು ಕಚೇರಿಗೆ ಸೈರನ್ ಅಳವಡಿಕೆ!

 ಇನ್ನು ರಾಜ್ಯದಲ್ಲಿ ಶಿಘ್ರವೇ ಉಪ ಚುನಾವಣೆ ನಡೆಯಲಿದ್ದು, ಅನರ್ಹರಾದ ಶಾಸಕರ 17 ಸ್ಥಾನಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಹಗಲಿರುಳು ಶ್ರಮಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದರು.

Follow Us:
Download App:
  • android
  • ios