ಬೆಂಗಳೂರು (ಆ. 2): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧ ವಿವಿಧ ಇಲಾಖೆಗಳ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಹೀಗಾಗಿ ಬಿಎಸ್‌ವೈ ಬರುವುದನ್ನು ತಿಳಿಯಲು ಅಧಿಕಾರಿಗಳು ತಮ್ಮ ಕಚೇರಿಗಳಿಗೆ ಸೈರನ್ ಅಳವಡಿಸಿಕೊಂಡಿದ್ದಾರೆ.

ವಿಧಾನಸೌಧಕ್ಕೆ ದಿಢೀರ್ ಭೇಟಿ; ನೌಕರರಿಗೆ ಚುರುಕು ಮುಟ್ಟಿಸಿದ ಸಿಎಂ

ಬಿಎಸ್‌ವೈ ವಿಧಾನಸೌಧಕ್ಕೆ ಕಾಲಿಡುತ್ತಿದ್ದಂತೆ ಎಲ್ಲ ಕಚೇರಿಯಲ್ಲಿ ಸೈರನ್ ಹೊಡೆದು ಕೊಳ್ಳಲಿದೆ. ಈ ಶಬ್ದ ಕೇಳುತ್ತಿದ್ದಂತೆ ಅಧಿಕಾರಿಗಳು ತಕ್ಷಣ ಬಂದು ತಮ್ಮ ಆಸನದಲ್ಲಿ ಕುಳಿತು ಕೆಲಸ ಮಾಡಲಿದ್ದಾರೆ. ಒಂದು ವೇಳೆ ಅಧಿಕಾರಿಗಳು ಬರದೇ ಇದ್ದರೆ ಅವರ ಸೀಟಿನಲ್ಲಿ ಇನ್ನೊಬ್ಬರನ್ನು ಕೂರಿಸಲು ವ್ಯವಸ್ಥೆ ಮಾಡಿ ಕೊಂಡಿದ್ದಾರೆ.

ಇದಕ್ಕಾಗಿ ವಿಧಾನಸೌಧದ ಮುಂಭಾಗದಲ್ಲಿ ವಿಶೇಷ ಸಿಸಿಟೀವಿ ಕ್ಯಾಮರಾವೊಂದನ್ನು ಅಳವಡಿಸಲಾಗಿದೆ. ಯಡಿಯೂರಪ್ಪ ವಿಧಾನಸಭೆಯಿಂದ ನಿರ್ಗಮಿಸುತ್ತಿದ್ದಂತೆ ಮತ್ತೊಮ್ಮೆ ಸೈರನ್ ಶಬ್ದವಾಗಲಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.