Asianet Suvarna News Asianet Suvarna News

ಪರಿಕ್ಕರ್ ಬದಲಿಸಲು ಬಿಜೆಪಿ ಚಿಂತನೆ: ಹಾಗಾದ್ರೆ ಗೋವಾ ಹೊಸ ಸಿಎಂ ಯಾರು?

ಗೋವಾಗೆ ಹೊಸ ಸಿಎಂ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಭರದ ಸಿದ್ಧತೆ ನಡೆಸಿದೆ. ಹಾಗಾದ್ರೆ ಯಾರಾಗ್ತಾರೆ ಹೊಸ ಗೋವಾ ಮುಖ್ಯಮಂತ್ರಿ? ಇಲ್ಲಿದೆ ಫುಲ್ ಡಿಟೇಲ್ಸ್

BJP high command planed to select new cm for Goa
Author
Bengaluru, First Published Oct 17, 2018, 1:10 PM IST
  • Facebook
  • Twitter
  • Whatsapp

ಪಣಜಿ, [ಅ.17]: ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.

ಮನೋಹರ್​ ಪರಿಕ್ಕರ್​ ಅವರು ಪ್ಯಾಂಕ್ರಿಯಾಸ್ ಪ್ಯಾಂಕ್ರಿಯಾಸ್​ ಸಮಸ್ಯೆಯಿಂದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೊನ್ನೇ ಅಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅನಾರೋಗ್ಯ : ಬದಲಾಗುತ್ತಾರಾ ಮುಖ್ಯಮಂತ್ರಿ?

ಸಂಪೂರ್ಣ ಗುಣಮುಖರಾಗದ ಹಿನ್ನಲೆಯಲ್ಲಿ ಸರ್ಕಾರದ ಯಾವುದೇ ಸಭೆ ಸಮಾರಂಭಗಳಿಗೂ ಅವರು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಯಕತ್ವ ಬದಲಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಹಲವು ಅನುಮಾನಗಳನ್ನು ಹುಟ್ಟು ಹಾಕಿದ ಮನೋಹರ ಪರಿಕ್ಕರ್ ಡಿಸ್ಚಾರ್ಜ್

ವಿಶ್ವಜಿತ್​ ಪ್ರತಾಪ್​ ರಾಣೆಗೆ ಸಿಎಂ ಪಟ್ಟ?

ಪ್ರಸ್ತುತ ಪರಿಕ್ಕರ್ ಸಚಿವ ಸಂಪುಟದಲ್ಲಿರುವ ವಿಶ್ವಜಿತ್​ ಪ್ರತಾಪ್​ ರಾಣೆ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಪರಿಕ್ಕರ್ ಸಚಿವ ಸಂಪುಟದಲ್ಲಿ ಮಹಿಳಾ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿರುವ ವಿಶ್ವಜಿತ್​ ಪ್ರತಾಪ್​ಸಿಂಗ್​ ರಾಣೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಬಿಜೆಪಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Follow Us:
Download App:
  • android
  • ios