ಬಳ್ಳಾರಿ  [ಆ.23]: ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾಲ್ಕು ವರ್ಷ ನಮ್ಮ ಸರ್ಕಾರವೇ ಅಧಿಕಾರ ನಡೆಸಲಿದೆ ಎಂದು ಸಚಿವ ಶ್ರೀ ರಾಮುಲು ಹೇಳಿದರು. 

ಬಳ್ಳಾರಿಯಲ್ಲಿ ಮಾತನಾಡಿದ ನೂತನ ಸಚಿವ ಶ್ರೀ ರಾಮುಲು, ಪಕ್ಷದಲ್ಲಿ ಶಿಸ್ತಿನ ಅಡಿಯಲ್ಲಿ ಖಾತೆಗಳ ಹಂಚಿಕೆಯಾಗುತ್ತಿದ್ದು, ಅಳೆದು ತೂಗಿ ಖಾತೆಗಳನ್ನು ನೀಡಲಾಗುತ್ತಿದೆ ಎಂದರು. 
 
ಇನ್ನು ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದ ಸಮ್ಮಿಶ್ರ ಸರ್ಕಾರ‌ ಅಧಿಕಾರ ಕಳೆದುಕೊಳ್ಳಲು ಬಿಜೆಪಿ ಕಾರಣವಲ್ಲ. ಈಗ ಅವರ ನಡುವಿನ ಭಿನ್ನಾಬಿಪ್ರಾಯವೇ ಇದಕ್ಕೆ ಕಾರಣ ಎನ್ನುವುದು ಈಗ ತಿಳಿದು ಬರುತ್ತಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಮೊದಲಿದಂಲೂ ಕೂಡ ವೈಮನಸ್ಸು ಇತ್ತು ಎಂದು ಶ್ರೀ ರಾಮುಲು ಹೇಳಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಮಾತ್ರವೇ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು. ಜೆಡಿಎಸ್, ಕಾಂಗ್ರೆಸ್ ನಾಯಕರೇ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಎಂದರು.

ಇನ್ನು ಅಸಮಾಧಾನಗೊಂಡಿದ್ದಾರೆ ಎನ್ನಲಾದ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಇವರೊಂದಿಗೆ ಹಿರಿಯರು ಮಾತನಾಡುತ್ತಾರೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಶಮನ ಮಾಡುತ್ತಾರೆ ಎಂದರು.