ಬಿಜೆಪಿಯು ಮೂರು ರಾಜ್ಯಗಳಲ್ಲಿ ಸೋಲನ್ನನುಭವಿಸಿದೆ. ಆದರೆ ಪಕ್ಷದ ನಾಯಕರು ಆ ಬಗ್ಗೆ ಚರ್ಚಿಸಲು ಸಿದ್ಧರಿಲ್ಲವೆಂದು ಶಿವಸೇನೆ ಹೇಳಿದೆ.
ಮುಂಬೈ (ಮಾ.16): ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಯನ್ನು ಪ್ರಜಾಪ್ರಭುತ್ವದ ಕಗ್ಗೊಲೆಯೆಂದು ಮಿತ್ರಪಕ್ಷ ಶಿವಸೇನೆ ಬಣ್ಣಿಸಿದೆ.
ಅಧಿಕಾರ ಪಡೆಯಲು ಬಜೆಪಿ ನಡೆಸಿರುವ ಕಸರತ್ತನ್ನು ಪ್ರಜಾತಂತ್ರದ ಕಗ್ಗೊಲೆಯೆಂದು ಹೇಳದೇ ಬೇರೆ ವಿಧಿಯಿಲ್ಲ. ಈ ಮುಂಚೆಯೂ ಅಂತಹ ಬೆಳವಣಿಗೆಗಳು ನಡೆದಿವೆ. ಅಂತ ವಿದ್ಯಾಮಾನಗಳನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮ ಪ್ರಜಾತಂತ್ರಕ್ಕಿರಲಿ ಎಂದು ಆಶಿಸುತ್ತೇವೆ, ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.
ಬಿಜೆಪಿಯು ಮೂರು ರಾಜ್ಯಗಳಲ್ಲಿ ಸೋಲನ್ನನುಭವಿಸಿದೆ. ಆದರೆ ಪಕ್ಷದ ನಾಯಕರು ಆ ಬಗ್ಗೆ ಚರ್ಚಿಸಲು ಸಿದ್ಧರಿಲ್ಲವೆಂದು ಶಿವಸೇನೆ ಹೇಳಿದೆ.
ಗೋವಾದಲ್ಲಿ ಕಾಂಗ್ರೆಸ್’ಗೆ 17 ಸ್ಥಾನಗಳನ್ನು ನೀಡುವ ಮೂಲಕ ಜನತೆ ಬಿಜೆಪಿಯನ್ನು ತಿರಸ್ಕರಿಸಿದೆ. ಅದು ಯಾರ ಸೋಲು ಎಂದು ಶಿವಸೇನೆ ಪ್ರಶ್ನಿಸಿದ್ದಾರೆ.