ಹೈದರಾಬಾದ್: ಹಿಂದುಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಹೈದರಾಬಾದ್‌ನ ಎಂಐಎಂ ಪಕ್ಷದ ಮುಖಂಡ ಅಕ್ಬರುದ್ದೀನ್ ಒವೈಸಿ ವಿರುದ್ಧ ಬಿಜೆಪಿ ಮುಸ್ಲಿಂ ಮಹಿಳೆಯೊಬ್ಬರನ್ನು ಕಣಕ್ಕೆ ಇಳಿ ಸಿದೆ. 

1999 ರಿಂದ ಸತತ 4 ಬಾರಿ ಚಂದ್ರಯಾನ ಗುಟ್ಟ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿ ರುವ ಒವೈಸಿ, ಸಂಸದ ಅಸಾದುದ್ದೀನ್ ಒವೈಸಿ ಅವರ ಸೋದರ. ಈ ಕ್ಷೇತ್ರ ಇವರ ಕುಟುಂಬದ ಹಿಡಿತದಲ್ಲಿದೆ. 

ಅದನ್ನು ತಪ್ಪಿಸಲು ಎಬಿವಿಪಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ಸೈಯದ್ ಶಹೆಜಾದಿ ಎಂಬುವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಶಹೆಜಾದಿಗೆ ಇದು ಮೊದಲ ಚುನಾವಣೆ.