ಬೆಳಗಾವಿ[ಜ.01] ಮಾಜಿ ಶಾಸಕರೊಬ್ಬರು ರಾಜ್ಯದ ದೋಸ್ತಿ ಸರ್ಕಾರವನ್ನು ಅನೈತಿಕ ಸಂಬಂಧಕ್ಕೆ ಹೊಲೀಸಿದ್ದಾರೆ. ಮಾಜಿ ಶಾಸಕ ಸಂಜಯ ಪಾಟೀಲ್  ರಾಜ್ಯ ಸರ್ಕಾರಕ್ಕೆ ಅನೈತಿಕ ಸಂಬಂಧದ ಹಣೆಪಟ್ಟಿ ಕಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ ಆಡಳಿತದ ಮೇಲೆ ಸಚಿವ ಡಿಕೆ ಶಿವಕುಮಾರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಮೇಲೆ ರಮೇಶ ಜಾರಕಿಹೊಳಿ ಅವರು ಅಸಮಾಧಾನಗೊಂಡಿದ್ದಾರೆ. ಇನ್ನು ಜ್ಯೂನಿಯರ್ ಲೀಡರ್ ಅಂದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಯಾವುದೆ ಪರಿಣಾಮ ಬೀರುತ್ತಿಲ್ಲ ಎಂದು ಹೇಳಿದ್ದಾರೆ.

ರಾಜಕಾರಣದಲ್ಲಿ ಈಗ ರಮೇಶ್ ಒಬ್ಬಂಟಿ! ಸತೀಶ್‌ಗೆ ಜೈ ಅಂದ ಶಾಸಕರು

ವೈಯಕ್ತಿಕವಾಗಿ  ರಮೇಶ ಜಾರಕಿಹೊಳಿ, ಮತ್ತು ಲಕ್ಷ್ಮಿ ಅವರ ನಡುವೆ ಮುನಿಸು ಇರಬಹುದು. ಆದರೆ ಸಮ್ಮಿಶ್ರ ಸರಕಾರ ಲಿವ್ ಇನ್ ಸಂಬಂಧದಲ್ಲಿದೆ.  ಯಾರು ಈ ಸರಕಾರದಲ್ಲಿ ನೆಮ್ಮದಿಯಾಗಿಲ್ಲ. ಬಿಜೆಪಿಗೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.