ಚಿಕ್ಕೋಡಿ(ಡಿ.27)   ರಮೇಶ್ ಜಾರಕಿಹೊಳಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವೆಲ್ಲರೂ ಬದ್ಧ ಎಂದೇ ಅತೃಪ್ತ ಶಾಸಕರು ಹೇಳಿಕೊಂಡು ಬಂದಿದ್ದರು. ಸಚಿವ ಸಂಪುಟ ವಿಸ್ತರಣೆಯಾದ ನಂತರ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನ್ನು ಆಡಿದ್ದರು

ರಮೇಶ್ ಬದಲು ಸತೀಶ್ ಜಾರಕಿಹೊಳಿಗೆ ಸಂಪುಟ ಮಣೆ ಹಾಕಿತ್ತು. ಇದಾದ ಕೆಲವೆ ದಿನದಲ್ಲೇ  ಅತೃಪ್ತ ಶಾಸಕರು ಅಣ್ಣ ರಮೇಶ್ ಬಿಟ್ಟು ಸತೀಶ್ ಹಿಂದೆ ಬಿದ್ದಿದ್ದಾರೆ. ಹಾಗಾಗಿ ರಮೇಶ್ ಇದೀಗ ಏಕಾಂಗಿಯಾಗಿದ್ದಾರೆ.

ಸಚಿವ ಸಂಪುಟ ಸೀಕ್ರೆಟ್: ವಿಲನ್ ಯಾರು? ಹೀರೋ ಯಾರು? ಇಲ್ಲಿದೆ ಅಸಲಿ ಕಥೆ

ರಮೇಶ್ ಜಾರಕಿಹೋಳಿ ಬೆಂಬಲಕ್ಕೆ ನಿಂತ ಶಾಸಕರ ಮನ ಒಲಿಸುವಲ್ಲಿ  ಸತೀಶ್ ಜಾರಕಿಹೋಳಿ ಯಶಸ್ವಿಯಾಗಿದ್ದಾರೆ. ರಮೇಶ್ ಬೆಂಬಲಿತ ಇಬ್ಬರು ಶಾಸಕರನ್ನು ಅಥಣಿಯಲ್ಲಿ ಭೇಟಿಯಾದ ಸತೀಶ್ ಮಾತುಕತೆ ನಡೆಸಿದ್ದಾರೆ. ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ್ ಕಮಟೊಳ್ಳಿ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.

ಆಪರೇಶನ್ ಕಮಲಕ್ಕೆ ಬ್ರೇಕ್ ಬೀಳುತ್ತಾ? ರಮೇಶ್ ಜಾರಕಿಹೊಳಿ ಅವರನ್ನೇ ಇಟ್ಟುಕೊಂಡು ಆಪರೇಶನ್ ಕಮಲ ನಡೆಸಿ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಬೇಕು ಎಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಆದರೆ ಇದೀಗ ರಮೇಶ್ ಬೆಂಬಲಿಗರು ನಿಧಾನಕ್ಕೆ ದೋಸ್ತಿ ಸರಕಾರದ ಕಡೆ ವಾಲಿರುವುದಕ್ಕೆ ಬಿಜೆಪಿ ಆಪರೇಶನ್ ಆಸೆಯನ್ನು ಸದ್ಯಕ್ಕೆ ಅನಿವಾರ್ಯವಾಗಿ ಮುಂದಕ್ಕೆ ಹಾಕಬೇಕಿದೆ.