ರಾಜ್ಯ ಬಿಜೆಪಿ ನಾಯಕರ ಹೋರಾಟ ಅಮಿತ್ ಶಾರನ್ನು ಮೆಚ್ಚಿಸಲೇ ಹೊರತು ಯಾವುದೇ ಸೈದ್ಧಾಂತಿಕ ನಿಲುವು ಅವರಿಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಸೆ.16): ರಾಜ್ಯ ಬಿಜೆಪಿ ನಾಯಕರ ಹೋರಾಟ ಅಮಿತ್ ಶಾರನ್ನು ಮೆಚ್ಚಿಸಲೇ ಹೊರತು ಯಾವುದೇ ಸೈದ್ಧಾಂತಿಕ ನಿಲುವು ಅವರಿಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮಮಂದಿರ, ಹಿಂದೂ ರಾಷ್ಟ್ರ ನಿರ್ಮಾಣದ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದರೆ ಅದನ್ನು ಸೈದ್ಧಾಂತಿಕ ನಿಲುವು ಎನ್ನಲಾಗದು. ನೀವು ಎಷ್ಟು ಸಲ ಜೈಲಿಗೆ ಹೋಗಿದ್ದೀರಿ? ಎಷ್ಟು ಕೇಸುಗಳು ನಿಮ್ಮ ಮೇಲೆ ಬಿದ್ದಿವೆ? ಎಷ್ಟು ಲಾಠಿ ಏಟು ತಿಂದಿದ್ದೀರಾ? ಎಂದು ಅಮಿತ್ ಶಾ ರಾಜ್ಯದ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ ಅಂತ ಮಾಧ್ಯಮಗಳಲ್ಲಿ ವರದಿಯಾಗಿದೆ.ಪಕ್ಷದ ಅಧ್ಯಕ್ಷ ಪ್ರಶ್ನೆ ಮಾಡುವ ರೀತಿಯೇ ಇದು? ಅಮಿತ್ ಶಾ ಮೆಚ್ಚಿಸಲಿಕ್ಕೆ ಬಿಜೆಪಿ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮೌಡ್ಯ ನಿಷೇಧ ಕಾಯ್ದೆ ಜಾರಿ ಬಗ್ಗೆ ಮಾತನಾಡುತ್ತಾ, ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು. ನವೆಂಬರ್’ನಲ್ಲಿ ನಡೆಯುವ ಅಧಿವೇಶನದಲ್ಲಿ ವಿಧೇಯಕ ಮಂಡಿಸುವ ಬಗ್ಗೆ ಚಿಂತನೆ ನಡೆದಿದೆ. ಟಿವಿಗಳಲ್ಲಿ ಜ್ಯೋತಿಷ್ಯ ತೋರಿಸಬೇಡಿ ಎನ್ನಲಾಗದು. ಜನರಿಗೆ ನಂಬಬೇಡಿ, ಪಾಲನೆ ಮಾಡಬೇಡಿ ಎಂದಷ್ಟೇ ನಾವು ಹೇಳಬಹುದು ಎಂದು ಸಿಎಮ ಹೇಳಿದ್ದಾರೆ.
