ಮತ್ತೇ ಟಿಪ್ಪು ಜಯಂತಿ ಆಚರಣೆ ವಿಚಾರ ಸದ್ದು ಮಾಡುತ್ತಿದೆ. ಕೊಡಗು ಜಿಲ್ಲಾ ಪಂಚಾಯತಿ ಟಿಪ್ಪು ಜಯಂತಿ ಆಚರಿಸುವುದಿಲ್ಲ ಅನ್ನೋ ನಿರ್ಣಯವನ್ನ ಕೈಗೊಂಡಿದೆ. ಬಿಜೆಪಿಯೂ ಕೂಡ ಟಿಪ್ಪು ಜಯಂತಿ ಆಚರಣೆ ಬೇಡ ಅಂತಾ ಪಟ್ಟು ಹಿಡಿದಿದೆ.
ಬೆಂಗಳೂರು (ಅ.13): ಮತ್ತೇ ಟಿಪ್ಪು ಜಯಂತಿ ಆಚರಣೆ ವಿಚಾರ ಸದ್ದು ಮಾಡುತ್ತಿದೆ. ಕೊಡಗು ಜಿಲ್ಲಾ ಪಂಚಾಯತಿ ಟಿಪ್ಪು ಜಯಂತಿ ಆಚರಿಸುವುದಿಲ್ಲ ಅನ್ನೋ ನಿರ್ಣಯವನ್ನ ಕೈಗೊಂಡಿದೆ. ಬಿಜೆಪಿಯೂ ಕೂಡ ಟಿಪ್ಪು ಜಯಂತಿ ಆಚರಣೆ ಬೇಡ ಅಂತಾ ಪಟ್ಟು ಹಿಡಿದಿದೆ.
ಮೈಸೂರು ಹುಲಿ ಎಂದೇ ಇತಿಹಾಸದಲ್ಲಿ ಕರೆಯಲ್ಪಡುವ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಮತ್ತೇ ವಿವಾದಕ್ಕೀಡಾಗಿದೆ. ಟಿಪ್ಪು ಸುಲ್ತಾನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದೆ. ವಿವಾದದ ನಡುವೆಯೇ ಸರ್ಕಾರ ಈ ನಿರ್ಧಾರವನ್ನ ತಗೆದುಕೊಂಡಿತ್ತು. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಆದ್ರಿಂದ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಬೇಡ ಅನ್ನೋ ನಿರ್ಣಯವನ್ನ ಆ ಜಿಲ್ಲಾ ಪಂಚಾಯತಿ ಕೈಗೊಂಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
ಆದರೆ ಇದ್ಯಾವುದಕ್ಕೂ ಕ್ಯಾರೆ ಅನ್ನದ ರಾಜ್ಯ ಸರ್ಕಾರ ನವೆಂಬರ್ ಹತ್ತರಂದು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಅಂತಾ ಹೇಳಿದೆ. ಜೊತೆಗೆ ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೊಡಗು ಜನತೆಗೆ ಟಿಪ್ಪು ಜಯಂತಿ ಬೇಡ ಅನ್ನೋ ನಿರ್ಣಯವನ್ನೇ ಅಲ್ಲಿನ ಜಿಲ್ಲಾ ಪಂಚಾಯತಿ ತಗೆದುಕೊಂಡಿದ್ದರೂ, ಸರ್ಕಾರ ಮಾತ್ರ ತನ್ನ ಮೊಂಡುತನವನ್ನ ಮುಂದುವರೆಸಿದೆ. ಕುಟ್ಟಪ್ಪ ಅನ್ನೋ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದ ಮತ್ತು ರಾಜ್ಯ ವ್ಯಾಪಿ ಸಾಕಷ್ಟು ಹಿಂಸೆಗೆ ಕಾರಣವಾದ ಇಂತಹ ಜಯಂತಿಗಳು ಬೇಕೇ ಅನ್ನೋದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ.
